ಆರೋಗ್ಯಮನರಂಜನೆಲೈಫ್ ಸ್ಟೈಲ್ಸೆಲೆಬ್ರಿಟಿಸೌಂದರ್ಯ

ನಟಿ ಮೌನಿ ರಾಯ್ ಫಿಟ್ ಆಗಿರಲು ಪ್ರತಿದಿನ ಈ ಯೋಗ ಮಾಡುತ್ತಾರಂತೆ

ಅನೇಕ ಬಾಲಿವುಡ್ ನಟಿಯರು ತಮ್ಮ ದೇಹವನ್ನು ಫಿಟ್ ಆಗಿಡಲು ಪ್ರತಿದಿನ ಯೋಗ ಅಭ್ಯಾಸ ಮಾಡುತ್ತಾರಂತೆ. ಅದರಲ್ಲಿ ನಟಿ ಮೌನಿ ರಾಯ್ ಕೂಡ ಒಬ್ಬರು. ಇವರು ಪ್ರತಿದಿನ ಫಿಟ್ ನೆಸ್ ಗಾಗಿ ಯೋಗ ಮಾಡುತ್ತಾಳೆ. ಹಾಗೇ ಈ ಬಗ್ಗೆ ತಮ್ಮ ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬಲು ಫೋಟೊ ಮತ್ತು ವಿಡಿಯೋವನ್ನು ಇನ್ ಸ್ಟಾಗ್ರಾಂ ಮೂಲಕ ಹಂಚಿಕೊಳ್ಳುತ್ತಾರೆ. ಹಾಗಾದ್ರೆ ಅವರು ಫಿಟ್ ಆಗಿರಲು ಯಾವೆಲ್ಲಾ ವ್ಯಾಯಾಮ ಮಾಡುತ್ತಾರೆ ಎಂಬುದನ್ನು ತಿಳಿಯೋಣ.

ಪದ್ಮಾಸನ : ಈ ಆಸನ ಮಾಡಲು ನೆಲದ ಮೇಲೆ ಕುಳಿತುಕೊಳ್ಳಿ. ನಂತರ ಎಡಗಾಲಿನ ಹಿಮ್ಮಡಿಯನ್ನು ಬಲತೊಡೆಯ ಮೇಲೆ ಇಟ್ಟುಕೊಂಡು ಹಿಮ್ಮಡಿಯನ್ನು ಹೊಕ್ಕುಳ ಬಳಿ ಬರಬೇಕು. ನಂತರ ಬಲಪಾದವನ್ನು ಎತ್ತಿ ಮತ್ತು ಎಡ ತೊಡೆಯ ಮೇಲೆ ಇರಿಸಿ. ಎರಡೂ ಹಿಮ್ಮಡಿಗಳು ಹೊಕ್ಕುಳ ಬಳಿ ಸಂಧಿಸುವ ರೀತಿಯಲ್ಲಿ ಪಾದವನ್ನು ಇರಿಸಿ. ಈ ಭಂಗಿಯನ್ನು ಅಭ್ಯಾಸ ಮಾಡುವಾಗ ಆಳವಾದ ಉಸಿರಾಟವನ್ನು ಅಭ್ಯಾಸ ಮಾಡಿ.

ವಜ್ರಾಸನ : ಮೊದಲು ನಿಮ್ಮ ಮೊಣಕಾಲುಗಳ ಮೇಲೆ ನೆಲದ ಮೇಲೆ ಕುಳಿತುಕೊಳ್ಳಿ. ಎರಡೂ ಪಾದಗಳ ಕಾಲ್ಬೆರಳುಗಳನ್ನು ಒಟ್ಟಿಗೆ ಸೇರಿಸಿ ಮತ್ತು ಹಿಮ್ಮಡಿಗಳನ್ನು ದೂರವಿಡಿ. ಸೊಂಟವನ್ನು ಹಿಮ್ಮಡಿಗಳ ಮೇಲೆ ಇರಿಸಿ. ಮತ್ತು ಅಂಗೈಗಳನ್ನು ಮೊಣಕಾಲುಗಳ ಮೇಲೆ ಇರಿಸಿ. ಈ ಸಮಯದಲ್ಲಿ ಬೆನ್ನು ಮತ್ತು ತಲೆಯನ್ನು ನೇರವಾಗಿ ಇರಿಸಿ. ಈ ಸಮಯ ನಿಮ್ಮ ಎರಡೂ ಮೊಣಕಾಲುಗಳು ಒಟ್ಟಿಗೆ ಸೇರಬೇಕು. ಸಾಮಾನ್ಯವಾಗಿ ಉಸಿರಾಟವನ್ನು ಮುಂದುವರಿಸಿ.

Spread the love

Related Articles

Leave a Reply

Your email address will not be published. Required fields are marked *

Back to top button