Latestಮನರಂಜನೆಸಿನಿಮಾಸೆಲೆಬ್ರಿಟಿ

ಶೂಟಿಂಗ್ ಸಮಯದಲ್ಲಿ ತಮಿಳು ನಟ ವಿಶಾಲ್​ಗೆ ಪೆಟ್ಟು

ಶೂಟಿಂಗ್ ಸ್ಥಳದಲ್ಲಿ ಅದೆಷ್ಟೇ ಎಚ್ಚರಿಕೆ ತೆಗೆದುಕೊಂಡರು ಕೆಲವೊಮ್ಮೆ ಅನಾಹುತಗಳು ನಡೆದು ಬಿಡ್ತಾವೆ. ಈಗಾಗ್ಲೆ ಅದೆಷ್ಟೋ ಕಲಾವಿಧರು ಶೂಟಿಂಗ್ ಸಂದರ್ಭದಲ್ಲಿ ಪೆಟ್ಟು ಮಾಡಿಕೊಂಡಿದ್ದರೆ, ಇನ್ನೂ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ ತಮಿಳು ನಟ ವಿಶಾಲ್​ಗೆ ಶೂಟಿಂಗ್ ಸಂದರ್ಭದಲ್ಲಿ ಗಾಯವಾಗಿದ್ದು ಅದರ ವಿಡಿಯೋವನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ತಮಿಳು ನಟ ವಿಶಾಲ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ವಿಶಾಲ್ ಕೈಯಲ್ಲಿ ನಾಲ್ಕೈದು ಸಿನಿಮಾಗಳಿದ್ದು ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ವಿನೋಥ್ ಕುಮಾರ್ ನಿರ್ದೇಶನದ ಲಾಠಿ ಸಿನಿಮಾದ ಶೂಟಿಂಗ್​ನಲ್ಲಿ ವಿಶಾಲ್ ಗಾಯಗೊಂಡಿದ್ದು ಅದ್ರ ವಿಡಿಯೋವನ್ನ ವಿಶಾಲ್ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಹೈದರಾಬಾದ್​ನಲ್ಲಿ ಲಾಠಿ ಸಿನಿಮಾದ ಸಾಹಸ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದ್ದು ಈ ವೇಳೆ ವಿಶಾಲ್ ಗಾಯಗೊಂಡಿದ್ದಾರೆ. ತಕ್ಷಣವೇ ವಿಶಾಲ್ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ವಿಶಾಲ್ ನಟನೆಯ ಸಿನಿಮಾಗಳಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿರುತ್ತವೆ. ಈ ಚಿತ್ರಕ್ಕೆ ಪೀಟರ್ ಹೇನ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಲಾಠಿ ಚಿತ್ರದ ಸಾಹಸ ದೃಶ್ಯವನ್ನ ಚಿತ್ರೀಕರಿಸುವಾಗ ಹೇರ್ ಲೈನ್ ಫ್ರ್ಯಾಕ್ಚರ್ ಆಗಿದ್ದು ವಿಶ್ರಾಂತಿಗಾಗಿ ಕೇರಳಕ್ಕೆ ತೆರಳಿದ್ದಾಗಿ ವಿಶಾಲ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button