ಉಪೇಂದ್ರ ನಿರ್ದೇಶನದ ಸಿನಿಮಾದಲ್ಲಿ ನೀವು ನಟಿಸಬಹುದು

ಕನ್ನಡ ಸಿನಿ ರಂಗದಲ್ಲಿ ತಮ್ಮ ವಿಭಿನ್ನ ಡೈಲಾಗ್ನಿಂದಲೇ ಪ್ರೇಕ್ಷಕರ ಮನಸಲ್ಲಿ ಕಿಚ್ಚು ಹಚ್ಚಿನ ನಟ ರಿಯಲ್ ಸ್ಟಾರ್ ಉಪೇಂದ್ರ. ಉಪ್ಪಿಯ ಖಡಕ್ ಡೈಲಾಗ್ ಕೇಳಿದ್ರೆ ಅಭಿಮಾನಿಗಳು ದಿಲ್ ಖುಷ್ ಆಗ್ತಾರೆ. ಸದ್ಯ ಉಪ್ಪಿ ಕಡೆಯಿಂದ ಹೊಸ ಕಲಾವಿಧರಿಗೆ ಬಿಗ್ ಆಫರ್ ಸಿಕ್ಕಿದೆ. ಬುದ್ದಿವಂತ ನೀಡಿದ ಆಫರ್ ನೋಡಿ ಅಭಿಮಾನಿಗಳು ಸೂಪರೋ ರಂಗ ಅಂತಿದ್ದಾರೆ.
ಡೇರ್ ಎಂಡ್ ಡ್ಯಾಷಿಂಗ್ ಡೈಲಾಗ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ ನಟ ರಿಯಲ್ ಸ್ಟಾರ್ ಉಪೇಂದ್ರ. ಉಪ್ಪಿ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಾ ಇರ್ತಾರೆ. ಅದ್ರಲ್ಲೂ ಉಪೇಂದ್ರ ಯಾವಾಗ ಆಕ್ಷನ್ ಕಟ್ ಹೇಳ್ತಾರೆ, ಯಾವಾಗ ಅವ್ರ ಸಿನಿಮಾ ನೋಡೋದು ಅಂತ ಅಂದುಕೊಳ್ತಿರ್ತಾರೆ. ಜೊತೆಗೆ ಒಮ್ಮೆಯಾದ್ರು ಉಪೇಂದ್ರ ಸಿನಿಮಾದಲ್ಲಿ ನಟಿಸ್ಬೇಕು ಅನ್ನೋ ಕನಸು ಸಾಕಷ್ಟು ಮಂದಿಗೆ ಇರುತ್ತೆ. ಅಂತಹ ಕಲಾವಿದರಿಗೆ ಉಪೇಂದ್ರ ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸೋ ಛಾನ್ಸ್ ನೀಡಿದ್ದಾರೆ.
ಯೆಸ್. ಉಪೇಂದ್ರ ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸೋ ಅವಕಾಶವನ್ನ ಹೊಸ ಕಲಾವಿದರಿಗೆ ನೀಡಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಮುಂದಾಗಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸಲು ಹೊಸ ಪ್ರತಿಭೆಗಳು ಬೇಕು ಅನ್ನೋದನ್ನ ಬುದ್ದಿವಂತ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಉಪ್ಪಿ ಸಿನಿಮಾದಲ್ಲಿ ನಟಿಸಲು ಏನು ಮಾಡಬೇಕು, ಎಷ್ಟು ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು, ಯಾವ ಅಡ್ರೆಸ್ಗೆ ನಿಮ್ಮ ಡಿಟೈಲ್ಸ್ ಕಳಿಸ್ಬೇಕು ಅನ್ನೋದರ ಡಿಟೈಲ್ಸ್ ಇಲ್ಲಿದೆ ನೋಡಿ.
“ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ. 14ರಿಂದ 60 ವರ್ಷ ವಯಸ್ಸಿನ ಕಲಾವಿದರು ತಾವು ನಟಿಸಿರುವ 2 ನಿಮಿಷದೊಳಗಿನ ವಿಡಿಯೋ ತುಣುಕನ್ನು upendraproductions@gmail.com ಮೇಲ್ ಐಡಿಗೆ ಕಳುಹಿಸಿಕೊಡಿ. ಕೊನೆಯ ದಿನಾಂಕ 10 ಮಾರ್ಚ್ 2022ಎಂದು ಪೋಸ್ಟ್ ಮಾಡಿದ್ದಾರೆ.
ಸದ್ಯ ಉಪೇಂದ್ರ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕೋವಿಡ್ ಕಾರಣದಿಂದ ಚಿತ್ರದ ಕೆಲಸಗಳು ಕೊಂಚ ತಡವಾಗಿದ್ದು ಚಿತ್ರದಲ್ಲಿ ಉಪ್ಪಿ ಡಿಫರೆಂಟ್ ಗೆಟಪ್ನಲ್ಲಿ ಕಾಣಿಸಿಕೊಳ್ತಿದ್ದಾರೆ.



