ಮನರಂಜನೆಸಿನಿಮಾಸೆಲೆಬ್ರಿಟಿ

ಹುಟ್ಟುಹಬ್ಬದಂದು ಅಭಿಮಾನಿಗಳ ಬಳಿ ವಿಶೇಷ ವಿನಂತಿ ಮಾಡಿಕೊಂಡ ಮೆಗಾಸ್ಟಾರ್ ಚಿರಂಜೀವಿ

ಟಾಲಿವುಡ್ ನ ಖ್ಯಾತ ನಟ ಚಿರಂಜೀವಿ ಅವರು ಆಗಸ್ಟ್ 22 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಂದು ಅವರು 66ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ತಮ್ಮ ಅಭಿಮಾನಿಗಳ ಬಳಿ ಒಂದು ವಿಶೇಷವಾದ ವಿನಂತಿಯೊಂದನ್ನು ಮಾಡಿದ್ದಾರೆ.

ಅದೇನೆಂದರೆ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಬೆಂಬಲಿಸುವ ಸಲುವಾಗಿ ತಮ್ಮ ಅಭಿಮಾನಿಗಳಿಗೆ ಇಂದುಮೂರು ಸಸಿಗಳನ್ನು ನೆಡಲು ಹೇಳಿದ್ದಾರೆ. “ ನಾವೆಲ್ಲರೂ ಪ್ರಕೃತಿ ತಾಯಿಗೆ ಋಣಿಯಾಗಿದ್ದೇವೆ. ವಾಯು ಮಾಲಿನ್ಯದ ವಿರುದ್ಧ ಹೋರಾಡಲು ನಾವು ಸಸಿಗಳನ್ನು ನೆಟ್ಟು ಬೆಳೆಸೋಣ. ಈ ವರ್ಷ ನನ್ನ ಪ್ರೀತಿಯ ಅಭಿಮಾನಿಗಳು ನನ್ನ ಹುಟ್ಟುಹಬ್ಬದಂದು ಮೂರು ಸಸಿಗಳನ್ನು ನೆಟ್ಟು ನಿಮ್ಮ ಪ್ರೀತಿಯನ್ನು ತೋರಿಸಿ ಟ್ಯಾಗ್ ಮಾಡಿ” ಎಂದು ತಮ್ಮ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ಆರಂಭಿಸಿದ ಸಂಸದ ಸಂತೋಷ್ ಕುಮಾರ್ ಅವರು ಚಿರಂಜೀವಿ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ನಟ ಮಹೇಶ್ ಬಾಬು ಕೂಡ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗಿಡ ನೆಡುವಂತೆ ತಿಳಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button