ಅಪ್ಪು ಸಮಾಧಿಗೆ ಆಗಮಿಸಿದ ವಿಶೇಷ ಅಭಿಮಾನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಮೂರು ತಿಂಗಳಾಗ್ತಿದ್ರು ಅಭಿಮಾನಿಗಳು ಮಾತ್ರ ಇಂದಿಗೂ ಅಪ್ಪು ಜಪ ಮಾಡ್ತಿದ್ದಾರೆ. ಪುನೀತ್ ಹೆಸರಿನಲ್ಲಿ ಸಾಕಷ್ಟು ಕಡೆ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಅದ್ರಲ್ಲೂ ಅಪ್ಪು ಸಮಾದಿಗೆ ನಿತ್ಯ ಸಾವಿರಾರು ಅಭಿಮಾನಿಗಳು ಭೇಟಿ ನೀಡ್ತಿದ್ದು ಇದೀಗ ಕಂಠೀರವ ಸ್ಟುಡಿಯೋ ಅಭೀಮಾನದ ಕ್ಷೇತ್ರವಾಗಿದೆ. ಪ್ರತಿದಿನ ಇಂದಿಲ್ಲೊಂದು ವಿಶೇಷ ಅಭಿಮಾನಕ್ಕೆ ಸಾಕ್ಷಿಯಾಗೋ ಅಪ್ಪು ಸಮಾಧಿ ಇದೀಗ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಿದೆ.
ಪುನೀತ್ ರಾಜ್ ಕುಮಾರ್ ನಿಧನ ಹೊಂದಿದಾಗ ಲಕ್ಷಾಂತರ ಮಂದಿ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡಿದ್ದರು. ಆದ್ರೆ ಸಾಕಷ್ಟು ಮಂದಿಗೆ ಅದು ಸಾದ್ಯವಾಗಿರಲಿಲ್ಲ. ಇದೀಗ ಅಪ್ಪು ಅಭಿಮಾನಿಗಳು ನಿತ್ಯ ಅಪ್ಪು ಸಮಾಧಿಗೆ ಭೇಟಿ ನೀಡಿ ಆ ಮೂಲಕ ಪುನೀತ್ ರಾಜ್ ಕುಮಾರ್ ರನ್ನ ಕಣ್ಮುಂಬಿಕೊಳ್ತಿದ್ದಾರೆ. ಅಂತೆಯೇ ಅಪ್ಪುವಿನ ಅಪ್ಪಟ ಅಭಿಮಾನಿಯೊಬ್ಬರು ಸುಮಾರು 3350 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದು ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಗುರು ಪ್ರಕಾಶ್ ಗೌಡ ಬರೋಬ್ಬರಿ 47 ದಿನಗಳ ಕಾಲ ಸೈಕಲ್ ಮೇಲೆ 3350 ಕಿಲೋ ಮೀಟರ್ ಪ್ರಯಾಣಿಸಿ ಅಪ್ಪು ಸಮಾಧಿ ದರ್ಶನ ಮಾಡಿದ್ದಾರೆ. ಡಿಸೆಂಬರ್ 10ನೇ ತಾರೀಖು ಸೈಕಲ್ ಜಾಥ ಹಮ್ಮಿಕೊಂಡಿದ್ದ ಗುರು ಪ್ರಕಾಶ್ ಗೌಡ 42ನೇ ದಿನಕ್ಕೆ ಕಠೀರವ ಸ್ಟುಡಿಯೋ ತಲುಪಿದ್ದಾರೆ, ಗುರುಪ್ರಕಾಶ್ ಸಮಾಧಿ ತಲುಪಲು ಒಟ್ಟು 47 ದಿನಗಳು ಹಿಡಿದಿದ್ದು ಅದರಲ್ಲಿ 5 ದಿನ ಸೈಕಲ್ ಕೆಟ್ಟು ಹೋಗಿತ್ತಂತೆ.
ಗುರು ಪ್ರಕಾಶ್ ಗೌಡ ಕಂಠೀರವ ಸ್ಟುಡಿಯೋ ತಲುಪುತ್ತಿದ್ದಂತೆ ಅಭಿಮಾನಿಗಳು ಅವ್ರನ್ನ ಆಧಾರದಿಂದ ಬರಮಾಡಿಕೊಂಡರು. ಅಲ್ಲದೆ ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುತ್ರ ಯುವರಾಜ್ ಕುಮಾರ್ ಗುರು ಪ್ರಕಾಶ್ ಗೌಡರನ್ನ ಸ್ವಾಗತಿಸಿ, ಅಪ್ಪು ಅವ್ರನ್ನ ಮನೆಯವ್ರು ಜಾಸ್ತಿ ಪ್ರೀತಿಸುತ್ತಾರಾ ಅಥವಾ ಅವ್ರ ಅಭಿಮಾನಿಗಳು ಜಾಸ್ತಿ ಪ್ರೀತಿಸುತ್ತಾರಾ ಗೊತ್ತಿಲ್ಲ ಎಂದರು.




