ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಸಣ್ಣ ವಯಸ್ಸಿನಲ್ಲೇ ಪುನೀತ್ ಎಲ್ಲರನ್ನೂ ಮೀರಿ ಬೆಳೆದ: ಜೇಮ್ಸ್ ಸಿನಿಮಾ ನೋಡಿ ಕಣ್ಣೀರಿಟ್ಟ ಶಿವಣ್ಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಭರ್ಜರಿಯಾಗಿ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ. ಈ ವೇಳೆ ಡಿಸಿಆರ್  ಥಿಯೇಟರ್ ನಲ್ಲಿ ಸಿಹಿ ಹಂಚಿ ಇಡೀ ಚಿತ್ರತಂಡ ಸಂಭ್ರಮಿಸಿದೆ. ಸಿನಿಮಾ ವೀಕ್ಷಿಸಿದ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಹಾಗೂ ನಟ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ ಪುನೀತ್ ನೆನಪು ಮಾಡಿಕೊಂಡ ಗಳಗಳನೇ ಅತ್ತರು. ಏನು ಹೇಳಬೇಕಂತ ನನಗೆ ಗೊತ್ತಾಗುತ್ತಿಲ್ಲ. ಯಾವ ಸಿನಿಮಾ ರಿಲೀಸ್ ಆದರೂ ಮಾರ್ನಿಂಗ್ ಕಾಲ್ ಮಾಡಿ ಶಿವಣ್ಣ ಹೇಗಿದೆ ಎಂದು ಕೇಳುತ್ತಿದ್ದ. ಯಾವುದೇ ಸಿನಿಮಾ ರಿಲೀಸ್ ಆದರೂ ಸಖತ್ ಎಂಜಾಯ್ ಮಾಡ್ತಿದ್ವಿ ಎಂದರು.

ಸಿನಿಮಾದಲ್ಲಿ ನಟಿಸಿದಂತೆಯೇ ನಮ್ಮ ಜೀವನದಲ್ಲೂ ಬದುಕಬೇಕು ಅಪ್ಪು ಎಂದು ನಾನು ಹೇಳುತ್ತಿದ್ದೆ. ಚಿಕ್ಕ ವಯಸ್ಸಿನಲ್ಲೇ ಎಲ್ಲರನ್ನು ಮೀರಿ ಬೆಳೆದ. ಸಿನಿಮಾಗೆ ಬಂದ ಮೇಲೆ ಇನ್ನೂ ದೊಡ್ಡವನಾದ. ನಿರ್ದೇಶಕ ಚೇತನ್ ತಂಡ ಉತ್ತಮ ಕೆಲಸ ಮಾಡಿದೆ. ಕ್ಯಾಮಾರಾ, ಕೊರಿಯೋಗ್ರಫಿ, ಟೆಕ್ನಿಕಲ್ ಟೀಂ ಚೆನ್ನಾಗಿ ಕೆಲಸ ಮಾಡಿದೆ. ಒಬ್ಬ ಅಭಿಮಾನಿಯಾಗಿ ಸಿನಿಮಾ ನೋಡ್ತಾ ಎಂಜಾಯ್ ಮಾಡ್ತಿದ್ದೆ ಎಂದರು.

ಕೆಲ ಸೀನ್ ನೋಡಿ ಕಣ್ಣೀರು ಬರುತ್ತಿತ್ತು. ಇನ್ಮುಂದೆ ಅಪ್ಪಾಜಿ, ಅಮ್ಮ, ಪುನೀತ್ ಹೆಸರು ಉಳಿಸಿಕೊಂಡು ಹೋಗೋ ಶಕ್ತಿ ದೇವರು ನಮಗೆ ಕೊಡಲಿ. ಚಿತ್ರ ಯಶಸ್ವಿಯಾಗ್ತಿದೆ. ಪುನೀತ್ ಏನೇ ಯೋಚಿಸಿದರೂ ದೊಡ್ಡಮಟ್ಟದಲ್ಲಿ ಯೋಚಿಸುತ್ತಿದ್ದ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button