ಜೇಮ್ಸ್ ಸಿನಿಮಾ ನೋಡಿ ಕಣ್ಣೀರಿಟ್ಟ ನಟಿ ಪ್ರಿಯಾ ಆನಂದ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಪುನೀತ್ ಇಲ್ಲದ ಮೊದಲ ಹುಟ್ಟುಹಬ್ಬ ಹಾಗೂ ಕೊನೆಯ ಸಿನಿಮಾವನ್ನ ಅಭಿಮಾನಿಗಳು ಕಣ್ಣೀರಿನಲ್ಲಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಸಿನಿಮಾ ನೋಡಿ ಬಂದ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರು ಹಾಕ್ತಿದ್ದಾರೆ. ಸದ್ಯ ಜೇಮ್ಸ್ ಚಿತ್ರದ ನಟಿ ಪ್ರಿಯಾ ಆನಂದ್ ಕೂಡ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ.
ಪುನೀತ್ ಜೊತೆ ನಟಿಸಿದ ಪ್ರತಿಯೊಬ್ಬ ಕಲಾವಿದರನ್ನೂ ಅಪ್ಪು ಒಂದೇ ರೀತಿಯಲ್ಲಿ ನೋಡುತ್ತಿದ್ದರು. ಹಿರಿಯರು, ಕಿರಿಯರು ಎನ್ನದೆ ಪ್ರತಿಯೊಬ್ಬರನ್ನೂ ಸಮಾನ ರೀತಿಯಲ್ಲಿ ನೋಡುವುದು ಅಪ್ಪು ಅವರ ದೊಡ್ಡ ಗುಣ. ಪುನೀತ್ ನಟನೆಯ ರಾಜಕುಮಾರ ಹಾಗೂ ಜೇಮ್ಸ್ ಸಿನಿಮಾದಲ್ಲಿ ನಟಿ ಪ್ರಿಯಾ ಆನಂದ್ ನಟಿಸಿದ್ದರು. ಹೀಗಾಗಿ ಪುನೀತ್ ಅವರನ್ನ ಪ್ರಿಯಾ ಆನಂದ್ ತುಂಬಾ ಹತ್ತಿರದಿಂದಲೇ ನೋಡಿದ್ದಾರೆ.
ಸದ್ಯ ಪುನೀತ್ ಇಲ್ಲ ಎನ್ನುವ ಕಟು ಸತ್ಯವನ್ನ ಪ್ರಿಯಾ ಆನಂದ್ ಅವರಿಗೆ ಒಪ್ಪಿಕೊಳ್ಳಲು ತುಂಬಾ ಕಷ್ಟವಾಗಿದೆ. ಇದು ಜೇಮ್ಸ್ ಸಿನಿಮಾ ನೋಡಿದ ಬಳಿಕ ಪ್ರಿಯಾ ಆನಂದ್ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.




