ಮನರಂಜನೆಸ್ಯಾಂಡಲ್ ವುಡ್

ದುಡ್ಡಿಗೋಸ್ಕರ ಸಿನಿಮಾ ಮಾಡಲ್ಲ ಎಂದ ನಟಿ ಪ್ರೇಮಾ

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಪ್ರೇಮಾ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ವಿಕ್ರಂ ಪ್ರಭು ನಿರ್ದೇಶನದ ವೆಡ್ಡಿಂಗ್ ಗಿಫ್ಟ್ ಚಿತ್ರದ ಮೂಲಕ ಪ್ರೇಮಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದ್ದು ವೆಡ್ಡಿಂಗ್ ಗಿಫ್ಟ್ ಚಿತ್ರವನ್ನ ಒಪ್ಪಿಕೊಂಡಿದ್ದು ಯಾಕೆ ಅನ್ನೋದನ್ನ ಪ್ರೇಮಾ ತಿಳಿಸಿದ್ದಾರೆ.

‘‘ಪ್ರತಿ ಸಿನಿಮಾ ಮಾಡಿದಾಗಲೂ ಹೊಸ ಸಿನಿಮಾ ಮಾಡಿದ ಹಾಗೆ ಅನ್ನಿಸುತ್ತದೆ. ‘ವೆಡ್ಡಿಂಗ್ ಗಿಫ್ಟ್’ನಲ್ಲಿ ಎಲ್ಲರೂ ಸಹಕಾರ ನೀಡಿದ್ದಾರೆ. ಈ ಚಿತ್ರದ ಟೈಟಲ್ ಕೇಳಿದಾಗಲೇ ಕುತೂಹಲ ಮೂಡಿತ್ತು. ಸಾಮಾನ್ಯವಾಗಿ ಯಾವುದಾದರೂ ಚಿತ್ರದ ಕತೆ ಕೇಳಿದ ತಕ್ಷಣ ಎರಡು ದಿನವಾದರೂ ಸಮಯ ತೆಗೆದುಕೊಳ್ಳುತ್ತೇನೆ. ಆದರೆ ಈ ಚಿತ್ರದ ನಿರ್ದೇಶಕ ವಿಕ್ರಂ ಪ್ರಭು ಬಂದು ಕತೆ ಹೇಳುವಾಗ, ನನ್ನ ಜೊತೆ ನನ್ನ ತಾಯಿ ಇದ್ದರು.  ಕತೆ ಕೇಳಿದ ತಕ್ಷಣವೇ ಸಿನಿಮಾ ಮಾಡಲು ಒಪ್ಪಿಕೊಂಡೆ’’ ಎಂದರು.

ನಾನು ಯಾವತ್ತು ದುಡ್ಡಿಗೋಸ್ಕರ ಸಿನಿಮಾ ಮಾಡೋದಿಲ್ಲ. ‘‘ನನಗೆ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತೇನೆ. ನನಗೆ ಚಿತ್ರ, ಚಿತ್ರರಂಗದ ಮೇಲೆ ಪ್ಯಾಶನ್ ಇದೆ. ವೆಡ್ಡಿಂಗ್ ಗಿಫ್ಟ್ ನಿರ್ದೇಶಕರ ಮೊದಲ ಚಿತ್ರವಾದರೂ ಬಹಳ ಚೆನ್ನಾಗಿ ಯೋಜನೆ ಸಿದ್ಧಪಡಿಸಿದ್ದರು. ನಿಗದಿತ ಸಮಯಕ್ಕಿಂತ ಮೊದಲೇ ಚಿತ್ರವನ್ನು ಮುಗಿಸಿದ್ದೇವೆ. ಸಿನಿಮಾ ಮುಗಿದಿದ್ದೇ ತಿಳಿಯಲಿಲ್ಲ ಎಂದು ಪ್ರೇಮಾ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button