ಬಾಲಿವುಡ್ಮನರಂಜನೆ

ಮೊಬೈಲ್ ನಂಬರ್ ಲೀಕ್ ಮಾಡಿದ ಕಿಡಿಗೇಡಿಗಳು: ದೂರು ದಾಖಲಿಸಿದ ನಟಿ

ಸಾಮಾನ್ಯವಾಗಿ ಸಿನಿಮಾ ನಟಿಯರಿಗೆ ಕಿರುಕುಳ ನೀಡುವುದು ಹೊಸದೇನು ಅಲ್ಲ. ಇಂಥಹ ಸಾಕಷ್ಟು ಪ್ರಕರಣಗಳು ನಿತ್ಯ ನಡೆಯುತ್ತಲೇ ಇರುತ್ತದೆ. ಕೆಲವೊಬ್ಬರು ದೂರು ದಾಖಲಿಸುತ್ತಾರೆ. ಸದ್ಯ ಟಿವಿ ನಟಿಯೊಬ್ಬರಿಗೆ ಆನ್ ಲೈನ್ ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿದ್ದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹಿಂದಿ ಟಿವಿ ಧಾರವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಟಿಸಿರುವ ವಿಭೂತಿ ಠಾಕೂರ್ ಮೊಬೈಲ್ ನಂಬರ್ ಅನ್ನು ವ್ಯಕ್ತಿಯೊಬ್ಬರು ಆನ್ಲೈನ್ನಲ್ಲಿ ಶೇರ್ ಮಾಡಿ ಅಶ್ಲೀಲ ಸಂದೇಶವನ್ನು ಪ್ರಕಟಿಸಿದ್ದಾನೆ. ಬಳಿಕ ವಿಭೂತಿ ಠಾಕೂರ್ ಗೆ ಕರೆ ಮಾಡಿದ ಸಾಕಷ್ಟು ಮಂದಿ ಅಶ್ಲೀಲವಾಗಿ ಮಾತನಾಡಿದ್ದು, ಲೈಂಗಿಕ ಸೇವೆ ನೀಡುವಂತೆ ಕೇಳಿದ್ದಾರೆ.

ಘಟನೆಯಿಂದ ಮಾನಸಿಕ ಹಿಂಸೆ ಅನುಭವಿಸಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಘಟನೆಯ ಕುರಿತಾಗಿ ಬರೆದುಕೊಂಡಿದ್ದಾರೆ., ”ನನ್ನ ಖಾಸಗಿ ಸಂಖ್ಯೆಯನ್ನು ಈ ವ್ಯಕ್ತಿ ಬಹಿರಂಗಗೊಳಿಸಿದ್ದಾನೆ. ಆತ ಹಂಚಿಕೊಂಡಿರುವ ಪೋಸ್ಟ್ನಲ್ಲಿಯೇ ನನಗೆ ಕಿರುಕುಳ ನೀಡುವಂತೆ ಹೇಳಿದ್ದಾನೆ. ಇದು ನನಗೆ ತೀವ್ರ ಮಾನಸಿಕ ಹಿಂಸೆ ನೀಡುತ್ತಿದೆ. ಈ ರೀತಿಯ ವರ್ತನೆ ನಚಿಕೆಗೇಡು. ಅಲ್ಲದೆ ಇದು ಹೆಣ್ಣು ತನಕ್ಕೆ ಮಾಡಿದ ಅಪಮಾನ” ಎಂದು ಬರೆದುಕೊಂಡಿದ್ದಾರೆ.

‘ಕೆಲವು ಜನರಿಗೆ ಏಕೆ ಇಷ್ಟು ವಿಕೃತ ಮನಸ್ಸು ಇರುತ್ತದೆಂಬುದೇ ನನಗೆ ಅರ್ಥವಾಗುವುದಿಲ್ಲ. ನನ್ನ ವೈಯಕ್ತಿಕ ಜೀವನ ಹಾಗೂ ವೃತ್ತಿ ಬದುಕಿನ ಬಗ್ಗೆ ಗಮನ ಹರಿಸಿಕೊಂಡಿದ್ದೆ. ಆದರೆ ಇಂದಿನ ಈ ಬೆಳವಣಿಗೆ ತೀವ್ರ ಮಾನಸಿಕ ಹಿಂಸೆ ನೀಡಿ, ನೆಮ್ಮದಿ ಹಾಳು ಮಾಡಿದೆ ಎಂದಿದ್ದಾರೆ.

ನನ್ನ ಖಾಸಗಿ ಮೊಬೈಲ್ ನಂಬರ್ ಅನ್ನು ಬಹಿರಂಗಗೊಳಿಸಿದ ಇನ್ಸ್ಟಾಗ್ರಾಂ ಪೇಜ್ ವಿರುದ್ಧ ನಾನು ದೂರು ನೀಡಲಿದ್ದೇನೆ. ಅಲ್ಲದೆ, ನನಗೆ ಕರೆ ಮಾಡಿ ಕೆಟ್ಟದಾಗಿ ಸಂದೇಶ ಕಳಿಸಿದ ಎಲ್ಲ ಮೊಬೈಲ್ ಸಂಖ್ಯೆಗಳನ್ನು ನೀಡಲಿದ್ದೇನೆ. ವಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಆಗಬೇಕು  ಎಂದಿರುವ ನಟಿ ತಮ್ಮ ಮೊಬೈಲ್ ಸಂಖ್ಯೆಯನ್ನು ಬಹಿರಂಗಗೊಳಿಸಿದ ವ್ಯಕ್ತಿಯ ಇನ್ಸ್ಟಾ ಖಾತೆಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button