Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿ

ನಟಿ ಮೇಲೆ ಅತ್ಯಾಚಾರ ಆರೋಪ: ಸ್ಯಾಂಡಲ್​ವುಡ್​ ನಟ ಕಂ ನಿರ್ಮಾಪಕ ಬಂಧನ

ಬಣ್ಣದ ಬದುಕಿಗೆ ಮಾರುಹೋಗಿ ಅದೆಷ್ಟೋ ಮಂದಿ ತಮ್ಮ ಜೀವನವನ್ನ ನರಕವಾಗಿಸಿಕೊಂಡಿದ್ದಾರೆ. ಇದನ್ನೆ ಬಂಡವಾಳವಾಗಿಸಿಕೊಂಡ ಸಾಕಷ್ಟು ಜನ ಹುಡುಗಿಯರಿಗೆ ಮೋಸ ಮಾಡಿ ಜೈಲು ಸೇರಿರೋದು ಗೊತ್ತೇ ಇದೇ. ಇದೀಗ ಸ್ಯಾಂಡಲ್​ವುಡ್ ನಟ ಕಂ ನಿರ್ಮಾಪಕ ನಟಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ಕಳೆದ ವರ್ಷ ವಿಷನ್ 2023 ಎಂಬ ಸಿನಿಮಾ ಸೆಟ್ಟೇರಿತ್ತು. ಈ ಚಿತ್ರದ ನಟ ಕಂ ನಿರ್ಮಾಪಕ ಹರ್ಷವರ್ಧನ್ ಟಿ ಜಿ ಅಲಿಯಾಸ್ ವಿಜಯ್ ಭಾರ್ಗವ್ ನನ್ನ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸಿನಿಮಾದ ನಟಿ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕಳೆದ ಎರಡು ವರ್ಷಗಳಿಂದಲೂ ತಮಗೆ ಮೋಸ ಮಾಡಿದ್ದಾರೆ. ನೀನೇ ನನ್ನ ಹೆಂಡತಿ ಎಂದು ಹೇಳಿ ನನ್ನನ್ನ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿ ಮೋಸ ಮಾಡಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಅವಾಚ್ಯ ಶಬ್ದಗಳಿಮದ ನಿಂದಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.

ನಟಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿರ್ಮಾಪಕ ಹರ್ಷವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 417,376, 504 ಹಾಗೂ 506 ಅಡಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button