Breaking NewsLatestರಾಷ್ಟ್ರೀಯಸುದ್ದಿ

ತಾಂತ್ರಿಕ ದೋಷದಿಂದ ಹೊಲದಲ್ಲಿ ತಪನಗೊಂಡ ಸೇನಾ ವಿಮಾನ

ಸೇನಾ ವಿಮಾನವೊಂದು ತಾಂತ್ರಿಕ ದೋಷದಿಂದ ಹೊಲದಲ್ಲಿ ಪತನಗೊಂಡಿದ್ದು ಅದೃಷ್ಟವಶಾತ್ ಇಬ್ಬರು ತರಬೇತು ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಯಾದಲ್ಲಿರುವ ಇಂಡಿಯನ್ ಆರ್ಮಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಒಬ್ಬರು ಟ್ರೈನಿ ಪೈಲೆಟ್​ಗಳನ್ನ ಹೊತ್ತೊಯ್ಯುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಇಬ್ಬರು ಪೈಲಟ್​ಗಳಿದ್ದು ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ಗಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಬಂಗಜಿತ್ ತಿಳಿಸಿದ್ದಾರೆ.

ವಿಮಾನ ಪತನಗೊಂಡಿರುವುದನ್ನ ಗಮನಿಸಿದ ಸ್ಥಳಿಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಇಬ್ಬರು ಪೈಲೆಟ್​ಗಳನ್ನ ರಕ್ಷಿಸಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದ್ದು ಈ ಸಂಬಂಧ ತಜ್ಞರ ತನಿಖೆ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಏರ್​ಪೋರ್ಟ್ ಡೈರೆಕ್ಟರ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button