ಮನರಂಜನೆಸಿನಿಮಾಸೆಲೆಬ್ರಿಟಿ

ಜೂನಿಯರ್ ಎನ್ ಟಿಆರ್ ರನ್ನು ಹೊಗಳಿದ ಸ್ಯಾಂಡ್ ವುಡ್ ನಟ

ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಜೊತೆಯಾಗಿ ನಟಿಸಿದ್ದಾರೆ. ಇದು ಅಕ್ಟೋಬರ್ 13 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದರಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ನೊಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಅಲ್ಲದೇ ಈ ಹಿಂದೆ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಈಗಾಗಲೇ ರಾಜಮೌಳಿ ನಿರ್ದೇಶನದ ‘ಈಗಾ’ ಮತ್ತು ‘ಬಾಹುಬಲಿ’ ಚಿತ್ರದಲ್ಲಿ ನಟಿಸಿ ಕಿಚ್ ಸುದೀಪ್ ಜನಪ್ರಿಯರಾಗಿದ್ದರು. ಅಲ್ಲದೇ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಾಗಾಗಿ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದಲ್ಲಿ ಸುದೀಪ್ ನಟಿಸಬಹುದು ಅಂದುಕೊಂಡಿದ್ದರು.

ಆದರೆ ಈ ವದಂತಿಯನ್ನು ನಿರಾಕರಿಸಿದ ಕಿಚ್ಚ ಸುದೀಪ್ ಅವರು, ತಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಜೂನಿಯರ್ ಎನ್ ಟಿಆರ್ ಅವರನ್ನು ಹೊಗಳಿ ಮೆಚ್ಚುಗೆಗಳ ಸುರಿಮಳಗೈದಿದ್ದಾರೆ. ನಾನು ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರಿಗೆ ಮತ್ತು ಇತರರಿಗೂ ಗೌರವ ನೀಡುತ್ತೇನೆ. ನಾನು ಜೂನಿಯರ್ ಎನ್ ಟಿಆರ್ ಅವರನ್ನು ನನ್ನ ನೆಚ್ಚಿನವನಾಗಿ ಪರಿಗಣಿಸುತ್ತೇನೆ ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button