ಅಗ್ನಿ ಶ್ರೀಧರ್ ಕತೆಗೆ ಸಂಯುಕ್ತ ಹೆಗ್ಡೆ ನಾಯಕಿ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸಂಯುಕ್ತ ಹೆಗ್ಡೆ ತಮಿಳು ಹಾಗೂ ತೆಲುಗು ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಸಂಯುಕ್ತ ಖಾತೆಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ.
ಶ್ರೇಯಸ್ ನಟನೆಯ ರಾಣಾ ಚಿತ್ರದ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದ ಸಂಯುಕ್ತ ಇದೀಗ `ಕ್ರೀಂ’ ಹೆಸರಿನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದಾರೆ.

ಸಂಯುಕ್ತಾ ಹೆಗ್ಡೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ವಿಡಿಯೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಪದೇ ಪದೇ ತಮ್ಮ ದೇಹದ ಬಗ್ಗೆ ಕಾಮೆಂಟ್ ಮಾಡುತ್ತಿದ್ದವ್ರಿಗೆ ವಿಡಿಯೋವೊಂದನ್ನ ಹಾಕಿ ಆ ಮೂಲಕ ಧನ್ಯವಾದ ಹೇಳಿದ್ದಾರೆ.
45 ಕೆಜಿಯಿಂದ 50 ಕೆಜಿಗೆ ತೂಕ ಹೆಚ್ಚಿಸಿಕೊಂಡು ಈ ನನ್ನ ಟ್ರಾನ್ಸ್ಫಾರ್ಮೇಷನ್ನ ಪ್ರಶಂಸಿಸಿದ್ದಕ್ಕಾಗಿ, ನೀನು ಏನು ಬೇಕಾದರು ತಿನ್ನಬಹುದು ದಪ್ಪ ಆಗುವುದಿರಲ್ಲ ಎಂದವರಿಗೆ, ಸಣ್ಣಗಿರುವವರು ಫಿಟ್ ಆಗಿರಬೇಕು ಎಂಬ ನಂಬಿಕೆಗೆ, ದಪ್ಪಗಾಗಿ ಫಿಟ್ ಆಗಿರಬೇಕು ಎಂದು ಬದಲಾಯಿಸಿದವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.




