ಬಿಟೌನ್ ಸ್ಟಾರ್ಗಳಿಗೆ ಕಪಾಳ ಮೋಕ್ಷ ಮಾಡಿದ ಪುಷ್ಪ

ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸುಕುಮಾರ್ ನಿರ್ದೇಶನದ ಚಿತ್ರ ವಿಶ್ವದಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದ್ದು ಇದೇ ಮೊದಲ ಭಾರಿಗೆ ಅಲ್ಲು ಅರ್ಜುನ್ ನಟನೆಯ ಸಿನಿಮಾವೊಂದು ಹಿಂದಿಗೆ ಡಬ್ ಆಗಿದೆ. ಅಲ್ಲದೆ ಹಿಂದಿಯಲ್ಲಿ 96 ಕೋಟಿ ಘಳಿಸಿರೋ ಪುಷ್ಪ ಸಿನಿಮಾ ಎಲ್ಲರ ಹುಬ್ಬೇರಿಸಿದೆ.
ಪುಷ್ಪ ಸಿನಿಮಾದ ಕಲೆಕ್ಷನ್ ಬಾಲಿವುಡ್ ಸ್ಟಾರ್ಗಳನ್ನ ಅಚ್ಚರಿ ಮೂಡಿಸಿದೆ. ಅಲ್ಲದೆ ಬಾಲಿವುಡ್ನ ಸ್ಟಾರ್ ಚಿತ್ರಗಳ ಎದುರು ರಿಲೀಸ್ ಆದ ಪುಷ್ಪ ಸಿನಿಮಾ ಹಿಂದಿಯ ಮೂಲ ಭಾಷೆಯ ಸಿನಿಮಾಗಳನ್ನೇ ಕಲೆಕ್ಷನ್ ವಿಚಾರದಲ್ಲಿ ಹಿಂದಿಕ್ಕಿದೆ. ಸದಾ ಬಾಲಿವುಡ್ ಸ್ಟಾರ್ಗಳನ್ನ ಟೀಕಿಸುವ ನಟ, ಸ್ವಯಂ ಘೋಷಿತ ವಿಮರ್ಶಕ ಕಮಲ್ ಆರ್ ಖಾನ್ ಪುಷ್ಪ ಸಿನಿಮಾವನ್ನ ಹೊಗಳಿ ಬಾಲಿವುಡ್ ಸ್ಟಾರ್ಗಳನ್ನ ಟೀಕಿಸಿದ್ದಾರೆ.
ಪುಷ್ಪ ಚಿತ್ರ ಹಿಂದಿ ಅವತರಣಿಕೆ ಸುಮಾರು 100 ಕೋಟಿ ಗಳಿಕೆ ಮಾಡಿದೆ. ಇಂತಹ ದೊಡ್ಡ ಸಾಧನೆಗಾಗಿ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿನಂದನೆಗಳು. ಇದು ಬಾಲಿವುಡ್ ತಾರೆಯರಿಗೆ ಮಾಡಿದ ಕಪಾಳಮೋಕ್ಷ ಎಂದು ಕಮಾಲ್ ಆರ್ ಖಾನ್ ಟ್ವೀಟ್ ಮಾಡಿದ್ದಾರೆ.
ರಣವೀರ್ ಸಿಂಗ್ ನಟನೆಯ 83 ಸಿನಿಮಾ ಪುಷ್ಪ ಚಿತ್ರದ ಎದುರು ಬಿಡುಗಡೆಯಾಗಿತ್ತು. ಆದರೆ 83 ಚಿತ್ರವನ್ನ ಮೆಟ್ಟಿನಿಂತು ಪುಷ್ಪ ಸಿನಿಮಾ ಭರ್ಜರಿ ಯಶಸ್ಸು ಘಳಿಸಿತ್ತು. 83 ಸಿನಿಮಾ 103 ಕೋಟಿ ಕಲೆಕ್ಷನ್ ಮಾಡಿದ್ರೆ ಪುಷ್ಪ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಘಳಿಸಿದ್ದು 96 ಕೋಟಿ. ಇದೇ ವಿಚಾರವನ್ನ ಇಟ್ಟುಕೊಂಡು ಕಮಲ್ ಬಾಲಿವುಡ್ ಸ್ಟಾರ್ಗಳನ್ನ ಟೀಕಿಸಿದ್ದಾರೆ.




