ಮನರಂಜನೆಸಿನಿಮಾಸೆಲೆಬ್ರಿಟಿ
ಲಾಕ್ ಡೌನ್ ಸಂಚಲನ: ನಿನ್ನ ಸನಿಹಕೆ ಕವರ್ ಸಾಂಗ್ ವೈರಲ್

ನಿನ್ನ ಸನಿಹಕೆ ಚಿತ್ರದ ನೀ ಪರಿಚಯ ಹಾಡು, ಕಳೆದ ಲಾಕ್ ಡೌನ್ ನಲ್ಲಿ ಸಂಚಲ ಸೃಷ್ಟಿಸಿದೆ. ಸೋಷಿಯಲ್ ಮಿಡಿಯಾದಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯಲ್ಲಿ ಕವರ್ ವರ್ಷನ್ ಗಳನ್ನ ಮಾಡಿದ್ದಾರೆ. ಲಾಕ್ ಡೌನ್ ಸೂಪರ್ ಹಿಟ್ ಆಗಿರುವ ಈ ಹಾಡಿಗೆ ನೆಟ್ಟಿಗರ ಹಾಟ್ ಫೆವರೀಟ್ ಸಾಂಗ್ ಆಗಿದೆ.
ರಘು ದೀಕ್ಷಿತ್ ಸಂಗೀತ ಸಂಯೋಜನೆಯ ಈ ಹಾಡು ಯೂಟ್ಯೂಬ್ ನಲ್ಲಿ ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ. ಸೂರಜ್ ಗೌಡ ಅಭಿನಯಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಾಮ್ ಕುಮಾರ್ ಪುತ್ರಿ ಧನ್ಯಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ನಿನ್ನ ಸನಿಹಕೆ ಸಿನಿಮಾ ಲಾಕ್ ಡೌನ್ ನಂತರ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಅಂತ ಹೇಳಲಾಗುತ್ತಿದ್ದು, ಸದ್ಯದಲ್ಲೇ ಚಿತ್ರತಂಡ ಟ್ರೈಲರ್ ಹಾಗೂ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಲಿದೆ.




