ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಕತಾರ್ ನಲ್ಲಿ ಜೇಮ್ಸ್ ವಿಶೇಷ ಪ್ರದರ್ಶನ, ಪುನೀತ್ ನೆನೆದು ಭಾವುಕರಾದ ಕನ್ನಡಿಗರು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಗೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ರಿಲೀಸ್ ಆಗಿ ನಾಲ್ಕನೇ ದಿನ ಕಳೆದಿದ್ರು ಇಂದಿಗೂ ಥಿಯೇಟರ್ ಮುಂದೆ ಹೌಸ್ ಫುಲ್ ಬೋರ್ಡ್ ಗಳು ರಾರಾಜಿಸುತ್ತಿವೆ. ವಿದೇಶದಲ್ಲಿಯೂ ಪುನೀತ್ ರ ಲಕ್ಷಾಂತರ ಅಭಿಮಾನಿಗಳಿದ್ದು ಜೇಮ್ಸ್ ಕಣ್ಮುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಸದ್ಯ ಕತಾರ್ ನಲ್ಲಿರುವ ಅಭಿಮಾನಿಗಳು ಅಪ್ಪು ಮೇಲಿನ ಪ್ರೀತಿಗೆ ಜೇಮ್ಸ್ ಸಿನಿಮಾದ ವಿಶೇಷ ಪ್ರದರ್ಶನ ಹಮ್ಮಿಕೊಂಡು ಸಿನಿಮಾ ವೀಕ್ಷಿಸಿದ್ದಾರೆ.

ಕತಾರ್‌ನ ಕರ್ನಾಟಕ ಸಂಘದ ವತಿಯಿಂದ ಮಾರ್ಚ್‌ 18ರಂದು ಮಧ್ಯಾಹ್ನ 4 ಗಂಟೆಗೆ ಏಷಿಯನ್ ಟೌನ್ ಚಿತ್ರಮಂದಿರದಲ್ಲಿ ‘ಜೇಮ್ಸ್’ ಸಿನಿಮಾದ ಪ್ರದರ್ಶನ ಏರ್ಪಡಿಸಲಾಗಿತ್ತು. ಕತಾರ್‌ನಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಸಿನಿಮಾವನ್ನು ನೋಡಿ ಸಂಭ್ರಮಿಸಿದರು. 2019ರ ನವೆಂಬರ್ ತಿಂಗಳಿನಲ್ಲಿ ಇದೇ ಕರ್ನಾಟಕ ಸಂಘ ಕತಾರ್ ಆಯೋಜಿಸಿದ್ದ ‘ಕರ್ನಾಟಕ ರಾಜ್ಯೋತ್ಸವ’ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಅವರು ದಂಪತಿ ಸಮೇತರಾಗಿ ಆಗಮಿಸಿದ್ದರು. ಅದೇ ಕಾತರ್ ಗೆ ಪುನೀತ್ ಅವರ ಕೊನೆಯ ಭೇಟಿಯಾಗಿತ್ತು.

ಕತಾರ್‌ನಲ್ಲಿ ನೆಲೆಸಿರುವ ಕನ್ನಡಿಗರು ನೆಚ್ಚಿನ ನಟನನ್ನು ಗೌರವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ‘ಜೇಮ್ಸ್’ ಸಿನಿಮಾವನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ‘ಜೇಮ್ಸ್’ ಚಿತ್ರ ಮಾರ್ಚ್ 17ರಂದು ಕತಾರ್‌ನಲ್ಲಿ ತೆರೆಕಂಡಿದ್ದು, ಸಾಕಷ್ಟು ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಅಂದು ಸಿನಿಮಾ ನೋಡಿದ ಸಾಕಷ್ಟು ಅಭಿಮಾನಿಗಳು ಮರುದಿನ ಮತ್ತೊಮ್ಮೆ ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಜೇಮ್ಸ್ ಸಿನಿಮಾ ಪ್ರದರ್ಶನಕ್ಕೂ ಮೊದಲು ಸಂಚಾಲಕರು ಹಾಗು ಭಾರತೀಯ ಸಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ನೆರೆದ ಕನ್ನಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಆತ್ಮೀಯ ಸ್ನೇಹಿತರು ಆಗಿದ್ದ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button