ಮನರಂಜನೆಸಿನಿಮಾಸೆಲೆಬ್ರಿಟಿ

500 ಕೋಟಿ ರೂ. ಬಜೆಟ್‌ನಲ್ಲಿ ‘ಕೃಷ್ಣರಾಜ- 4’ ಸಿನಿಮಾ ನಿರ್ಮಾಣ

ಮೈಸೂರು: ಇದು ಇಡೀ ಸ್ಯಾಂಡಲ್ ವುಡ್ ನಲ್ಲೆ ಹೆಚ್ಚು ಖರ್ಚು ಮಾಡುತ್ತಿರುವ ಹೈ ಬಜೆಟ್ ಸಿನಿಮಾ. ತೀರಾ ಕೆಜಿಎಫ್ ಸಿನಿಮಾ ಮೀರಿಸುವಂತೆ ಈ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೆ ಅಲ್ಲ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೆ ನಡೆಯಲಿದೆ.

ಅಂದ ಹಾಗೆ ಈ ಸಿನಿಮಾ ನಿರ್ಮಾಣ ಮಾಡುತ್ತಿರುವರು ಗಾನ ಶ್ರವಣ ಸ್ವಾಮೀಜಿ. 1995 ರಿಂದ ಸಿನಿಮಾದಲ್ಲಿ ಗಾಯಕನಾಗಿ ಗುರುತಿಸಿಕೊಂಡ ನಂತರ ಶ್ರವಣ ಸ್ವಾಮೀಜಿ ತರುವಾಯ ಬಿಜಿನೆಸ್ ಕಡೆ ವಾಲಿದರು. ಗೋಲ್ಡ್ ಕಂಪನಿಯ ಉದ್ಯಮದಲ್ಲಿರುವ ಶ್ರವಣ ಸ್ವಾಮೀಜಿ ಅವರು, ಹಾಂಕಾಂಗ್, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಗೋಲ್ಡ್ ಶೋ ರೂಂ ಹೊಂದಿದ್ದಾರೆ.

ಕೇರಳದ ಭಗವತಿ ದೇವಿ ದೇವಸ್ಥಾನದ ನವೀಕರಣಕ್ಕೆ ಇತ್ತೀಚಿಗೆ 526 ಕೋಟಿ ರೂಪಾಯಿ ದೇಣಿಗೆ ನೀಡಿ ದೇಶದಲ್ಲೆ ದೊಡ್ಡ ಸುದ್ಧಿಯಾಗಿದ್ದರು. ಈಗ ಶ್ರವಣ ಸ್ವಾಮೀಜಿ ಅವರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಹೈ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಜಿಎಸ್ ಆರ್ ಪ್ರೋಡಕ್ಷನ್ ಬ್ಯಾನರ್ ನಲ್ಲಿ ಈ ಸಿನಿಮಾ ಮಾಡುತ್ತಿದ್ದಾರೆ. ಅಂದ ಹಾಗೆ ಈ ಸಿನಿಮಾದ ಹೆಸರು ಕೃಷ್ಣರಾಜ-4. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ. ಕನ್ನಡಿ ಮಾತ್ರವಲ್ಲದೆ ತಮಿಳು, ತೆಲಗು, ಮಲೆಯಾಳಂ, ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಸಿನಿಮಾ ಮಾಡಲಿದ್ದಾರೆ. 

ಇಷ್ಟೆ ಅಲ್ಲದೆ ಮೈಸೂರಿನಲ್ಲಿ ಸ್ವಾಮೀಜಿ ಫಿಲಂ ಸಿಟಿ ಮಾಡಲು ಈಗಾಗಲೇ 600 ಎಕರೆ ಭೂಮಿ ಖರೀದಿ ಮಾಡಿದ್ದೇವೆ ಎಂದು ಗಾನ ಶ್ರವಣ ಸ್ವಾಮೀಜಿ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button