Latestಮನರಂಜನೆಸಿನಿಮಾಸೆಲೆಬ್ರಿಟಿ

ಮೆಗಾಸ್ಟಾರ್ ಚಿರಂಜೀವಿ ಮತ್ತೆ ಕೊರೊನಾ ಪಾಸಿಟಿವ್

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಮತ್ತೆ ಕೊರೊನಾ ದೃಢಪಟ್ಟಿದೆ. ಕಳೆದ ವರ್ಷ ಒಮ್ಮೆ ಕೂಡ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸ್ವಲ್ಪ ದಿನಗಳ ಕಾಲ ಐಸೋಲೇಷನ್ ನಲ್ಲಿ ಇದ್ದು ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಈ ವಿಚಾರವನ್ನು ಚಿರಂಜೀವಿ ತಮ್ಮ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನನಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಹೀಗಾಗಿ ಪರೀಕ್ಷೆ ಮಾಡಿಸಿದೆ. ಆಗಾ ಕೊರೊನಾ ಪಾಸಿಟಿವ್ ಬಂದಿರುವುದು ತಿಳಿದುಬಂದಿದೆ. ಸದ್ಯ ನಾನು ಹೋಂ ಕ್ವಾರಂಟೈನ್ ನಲ್ಲದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆ ಒಳಗಾಗುವಂತೆ ಮನವಿ ಮಾಡಿಕೊಳ್ಳತ್ತೇನೆ .

ಸದ್ಯ ಅವರು ಹೋಂ ಕ್ವಾರಂಟೈನ್ ನಲ್ಲಿ ಇದ್ದಿದ್ದರಿಂದ ಯಾರನ್ನು ನೋಡಲು ಮತ್ತು ಭೇಟಿ ಮಾಡುತ್ತಿಲ್ಲ. ಸಿನಿಮಾದ ಯಾವ ಕೆಲಸಗಳು ಸದ್ಯಕ್ಕೆ ನಡೆಯುತ್ತಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button