ಮನರಂಜನೆಸಿನಿಮಾಸೆಲೆಬ್ರಿಟಿ

ಇನ್​ಸ್ಟಾಗ್ರಾಂಗೆ ಎಂಟ್ರಿಕೊಟ್ಟ ಮೀರಾ ಜಾಸ್ಮಿನ್: ಮೊದಲ ದಿನವೇ ಲಕ್ಷಕ್ಕೂ ಅಧಿಕ ಫಾಲೋವರ್ಸ್

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜೊತೆ ಅರಸು ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಐಶ್ವರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೀರಾ ಜಾಸ್ಮಿನ್ ಇಂದಿಗೂ ಅದೇ ಪಾತ್ರದಿಂದಲೇ ಕನ್ನಡ ಚಿತ್ರ ರಸಿಕರನ್ನ ಹಿಡಿದಿಟ್ಟಿದ್ದಾರೆ. ಆದ್ರೆ ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗ, ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದ ಮೀರಾ ಜಾಸ್ಮೀನ್ ಇದೀಗ ದಿಡೀರ್ ಎಂದು ಸಾಮಾಜಿಕ ಜಾಲಾ ತಾಣಕ್ಕೆ ಲಗ್ಗೆ ಇಟ್ಟಿದ್ದಾರೆ.

ಮಲಯಾಳಂನ ಸೂತ್ರಧಾರನ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಮೀರಾ ಜಾಸ್ಮಿನ್ ಬಳಿಕ ತಮಿಳು, ತೆಲುಗು, ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿ ಬಿಟ್ರು. ಒಂದರ ಹಿಂದೊದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಮೀರಾ ಜಾಸ್ಮಿನ್ ಮದುವೆಯ ಬಳಿಕ ಚಿತ್ರರಂಗದಿಂದ ಕೊಂಚ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಇದೀಗ ಏಕಾ ಏಕಿ ಸಾಮಾಜಿಕ ಜಾಲಾ ತಾಣಕ್ಕೆ ಎಂಟ್ರಿಕೊಟ್ಟಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಮೀರಾ ಜಾಸ್ಮಿನ್ ನಿನ್ನೆ ಇನ್​ಸ್ಟಾಗ್ರಾಂ ಖಾತೆಯನ್ನ ಓಪನ್ ಮಾಡಿದ್ದಾರೆ. ಇದುವರೆಗೂ ಎರಡು ಪೋಸ್ಟ್​ಗಳನ್ನ ಮೀರಾ ಜಾಸ್ಮಿನ್ ಶೇರ್ ಮಾಡಿದ್ದಾರೆ. ಸೀರೆಯುಟ್ಟಿರುವ ಪೋಟೋ ಶೇರ್ ಮಾಡಿರುವ ನಟಿ ನಾವು ಯಾವಾಗಲು ಪ್ರಾರಂಭವನ್ನ ಘೋಷಿಸೋಣ. ನಮ್ಮೆಲ್ಲರನ್ನೂ ಒಬ್ಬರಿಗೊಬ್ಬರು ಹತ್ತಿರವಾಗಿಸುವ ಈ ಹೆಜ್ಜೆಯನ್ನು ಇಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಮತ್ತೋಂದು ವಿಡಿಯೋವನ್ನ ಪೋಸ್ಟ್ ಮಾಡಿರುವ ಮೀರಾ ಜಾಸ್ಮಿನ್ ನೀವು ನನಗೆ ನಿಮ್ಮ ಅಮೂಲ್ಯ ಸಮಯವನ್ನ ನೀಡಿದ್ದೀರಿ. ಇದು ಎಲ್ಲದಕ್ಕಿಂತ ಅತ್ಯುತ್ತಮ ಉಡುಗೊರೆ. ಸಂಪೂರ್ಣ ಕೃತಜ್ಷತೆ ಮತ್ತು ಅನಂತ ಪ್ರೀತಿ ನಿಮ್ಮ ಮೇಲಿದೆ. ಮುಂದಿನ ಈ ಸುಂದರ ಪಯಣ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ಮೀರಾ ಜಾಸ್ಮಿನ್ ಇನ್​ಸ್ಟಾಗ್ರಾಂ ಖಾತೆ ತೆರೆದ ಮೊದಲ ದಿನವೇ ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಅಲ್ಲದೆ ಮೀರಾ 132 ಮಂದಿಯನ್ನ ಫಾಲೋ ಮಾಡುತ್ತಿದ್ದು ಎರಡೂ ಪೋಸ್ಟ್​ಗಳಿಗೂ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button