Breaking NewsLatestಜಿಲ್ಲಾ ಸುದ್ದಿವಿದೇಶಸುದ್ದಿ

ಲೈಬಿರಿಯಾ ಚರ್ಚ್ ನಲ್ಲಿ ಕಾಲ್ತುಳಿತ ದುರಂತ: 29 ಸಾವು

ಮನ್ರೋವಿಯಾ: ಲೈಬಿರಿಯಾ ಚರ್ಚ್ ನಲ್ಲಿ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತ ದುರಂತದಲ್ಲಿ 29 ಭಕ್ತಾದಿಗಳು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಲೈಬಿರಿಯಾ  ರಾಜಧಾನಿ ಮನ್ರೋವಿಯಾ  ಹೊರವಲಯದ ಚರ್ಚ್ ನಲ್ಲಿ  ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಆರಾಧನಾ ಕಾರ್ಯಕ್ರಮದಲ್ಲಿ 29 ಭಕ್ತಾದಿಗಳು ಮತಪಟ್ಟಿದ್ದಾರೆ. ದರೋಡೆಗೆ ಪ್ರಯತ್ನಿಸಿದ ಗುಂಪನ್ನು  ಸೆರೆಹಿಡಿಯುವ ಪ್ರಯತ್ನದಲ್ಲಿ ಉಂಟಾದ ನೂಕುನುಗ್ಗಲು, ಕಾಲುತುಳಿತದ ಘಟನೆಗೆ ಕಾರಣವಾಗಿದೆಯೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅನೇಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೂ ಈ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button