ನಟಿ ಕಾಜೋಲ್ಗೆ ಕೊರೊನಾ: ಪುತ್ರಿಯ ಫೋಟೋ ಹಂಚಿಕೊಂಡ ನಟಿ

ಇತ್ತೀಚೆಗೆ ಬಿಟೌನ್ನ ಸಾಕಷ್ಟು ನಟ, ನಟಿಯರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದು ಇದೀಗ ನಟಿ ಕಾಜೋಲ್ಗೆ ಕೊವಿಡ್ ಇರುವುದು ದೃಡಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ನಟಿ ಪುತ್ರಿಯ ಪೋಟೋವನ್ನ ಹಂಚಿಕೊಂಡಿದ್ದಾರೆ. ಪೋಟೋ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು ಮಗಳ ಪೋಟೋವನ್ನ ಹಂಚಿಕೊಂಡಿರುವುದಕ್ಕೆ ನಟಿ ಕಾಜೋಲ್ ಸ್ಪಷ್ಟನೇ ನೀಡಿದ್ದಾರೆ.
ಮಗಳು ನ್ಯಾಸಾ ಪೋಟೋ ಹಂಚಿಕೊಂಡಿರುವುದಕ್ಕೆ ಸ್ಪಷ್ಟನೆ ನೀಡಿರುವ ಕಾಜೋಲ್ ನೆಗಡಿಯಾಗಿ ಕೆಂಪಾಗಿರುವ ನನ್ನ ಮೂಗನ್ನು ತೋರಿಸಲು ಇಷ್ಟವಿಲ್ಲ. ಆದ್ದರಿಂದ ಜಗತ್ತಿನಲ್ಲೇ ಅತ್ಯಂತ ಸುಂದರ ನಗುವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಮಿಸ್ ಯೂ ನೈಸಾ ದೇವ್ಗನ್ ಎಂದು ಬರೆದುಕೊಂಡಿದ್ದಾರೆ. ಕಾಜೋಲ್ ಹಂಚಿಕೊಂಡಿರುವ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು ಶೀಘ್ರವೇ ಚೇತರಿಸಿಕೊಳ್ಳುವಂತೆ ಸಾಕಷ್ಟು ಅಭಿಮಾನಿಗಳು ಹಾಗೂ ಬಾಲಿವುಡ್ ನಟ, ನಟಿಯರು ಹಾರೈಸಿದ್ದಾರೆ. ಅಲ್ಲದೆ ನೈಸಾಳ ಸೌಂದರ್ಯವನ್ನ ಮನಸಾರೆ ಹೊಗಳಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರೋ ಕಾಜೋಲ್ ಸದ್ಯ ನಿರ್ದೇಶಕಿ ರೇವತಿ ಆಕ್ಷನ್ ಕಟ್ ಹೇಳುತ್ತಿರುವ ದಿ ಲಾಸ್ಟ್ ಹುರ್ರೇ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಜೋಲ್ ಪುತ್ರಿ ನೈಸಾ ದೇವ್ಗನ್ ಪ್ರಸ್ತುತ ಸಿಂಗಾಪುರದ ಗ್ಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ನಲ್ಲಿ ಅಂತರರಾಷ್ಟ್ರೀಯ ಹಾಸ್ಪಿಟಾಲಿಟಿ ಅಧ್ಯಯನ ಮಾಡುತ್ತಿದ್ದಾರೆ.




