ಕಚಗುಳಿ ಇಡುತಿದೆ ತೋತಾಪುರಿ ಚಿತ್ರದ ಮೊದಲ ಹಾಡು

ನಟ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಇದ್ದರೆ ಅಲ್ಲಿ ಕಾಮಿಡಿಗೆ ಬರವಿಲ್ಲ ಅನ್ನೋದು ಮತ್ತೊಮ್ಮೆ ಫ್ರೂವ್ ಆಗಿದೆ. ಈಗಾಗ್ಲೆ ನೀರ್ದೋಸೆ ಸಿನಿಮಾ ಮಾಡಿ ಪ್ರೇಕ್ಷಕರನ್ನ ರಂಜಿಸಿದ್ದ ಜೋಡಿಗಳು ಇದೀಗ ತೋತಾಪುರಿಯಲ್ಲಿ ಅಭಿಮಾನಿಗಳಿಗೆ ಕಚಗುಳಿ ಇಡೋಕೆ ರೆಡಿಯಾಗಿದ್ದಾರೆ. ಈಗಾಗ್ಲೆ ಚಿತ್ರದ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಹಾಡೊಂದನ್ನ ಬಿಡುಗಡೆ ಮಾಡಿದೆ.
ನಿರ್ದೇಶಕ ವಿಜಯ್ ಪ್ರಸಾದ್ ಸಿನಿಮಾದ ಆರಂಭದಿಂದಲೂ ವಿಭಿನ್ನ ಬರಹದಿಂದಲೇ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ್ದರು. ಇದೀಗ ರಿಲೀಸ್ ಆಗಿರೋ ಬಾಗ್ಲು ತೆಗಿ ಮೇರಿ ಜಾಂನ್ ಹಾಡು ವಿಭಿನ್ನ ಮ್ಯಾನರಿಸಂನಿಂದ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಕ್ಸಸ್ ಆಗಿದೆ.
ಸದ್ಯ ರಿಲೀಸ್ ಆಗಿರೋ ತೋತಾಪುರಿ ಹಾಡಿನಲ್ಲಿ ತುಸು ಹೆಚ್ಚೆ ಎನ್ನುವಂತೆ ಹಿಂದಿ ಹಾಗೂ ಉರ್ದು ಭಾಷೆಯನ್ನ ಬಳಸಲಾಗಿದೆ. ಈ ಹಿಂದೆಯೂ ರಿಲೀಸ್ ಅಗಿದ್ದ ಟೀಸರ್ನಲ್ಲಿ ಹಿಂದಿ ಹಾಗೂ ಉರ್ದು ಭಾಷೆ ಬಳಕೆ ಮಾಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಚಿತ್ರವನ್ನ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಮಾಡಬೇಕು ಅನ್ನೋ ಕಾರಣಕ್ಕೆ ಇತರ ಭಾಷೆಗಳನ್ನ ಬಳಸಲಾಗಿದೆ ಅನ್ನೊ ಆರೋಪ ಕೇಳಿ ಬಂದಿತ್ತು.




