Latestಮನರಂಜನೆಸಿನಿಮಾಸೆಲೆಬ್ರಿಟಿ

ಥಿಯೇಟರ್​ಗೆ ಹೋಗ್ಬೇಕು ಅಂದ್ರೆ ನಿಮ್ ಬಳಿ ಇವೆರಡು ಇರ್ಲೇ ಬೇಕು

ಕೊನೆಗೂ ಚಿತ್ರಮಂದಿರಗಳಲ್ಲಿ 100 ಆಸನಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದೇ ಖುಷಿಯಲ್ಲಿ ಥಿಯೇಟರ್​ಗೆ ಲಗ್ಗೆ ಇಟ್ಟು ಸಿನಿಮಾ ನೋಡ್ಬೇಕು ಅಂತ ನಿರ್ಧರಿಸಿದವ್ರಿಗೆ ಸರ್ಕಾರ ಕೆಲವೊಂದು ಶರತ್ತುಗಳನ್ನು ವಿಧಿಸಿದೆ. ಹಾಗಾದ್ರೆ ಸರ್ಕಾರ ವಿಧಿಸಿರೋ ಕಂಡಿಷನ್​ಗಳು ಏನೇನು ಅನ್ನೋದರ ಡಿಟೈಲ್ಸ್ ಇಲ್ಲಿದೆ.

ನೀವು ಥಿಯೇಟರ್​ಗೆ ಹೋಗ್ಬೇಕು ಅಂದುಕೊಂಡ್ರೆ ಎರಡು ಡೋಸ್ ಲಸಿಕೆ ಖಡಾಯವಾಗಿ ಪಡೆದಿರಲೇ ಬೇಕು. ಇಲ್ಲವಾದ್ರೆ ಥಿಯೇಟರ್ ಒಳಗೆ ಎಂಟ್ರಿಕೊಡೋ ಹಾಗೆ ಇಲ್ಲ. ಇನ್ನೂ ಇದ್ರ ಜೊತೆಗೆ ಮಾಸ್ಕ್ ಕಡ್ಡಾಯ. ಹಾಗಂತ ನೀವು ಯಾವ ಯಾವುದೋ ಮಾಸ್ಕ್ ಹಾಕಿ ಚಿತ್ರಮಂದಿರಗಳಿಗೆ ಹೋಗೋ ಹಾಗಿಲ್ಲ. ಬದಲಾಗಿ ಎನ್ 95 ಮಾಸ್ಕ್ ಧರಿಸಿದ್ರೆ ಮಾತ್ರವೇ ಥಿಯೇಟರ್ ಒಳಗೆ ಹೋಗಬಹುದು.

ಇದ್ರ ಮಧ್ಯೆ ಕೊರೊನಾ ಲಕ್ಷಣಗಳೇನಾದ್ರು ಕಾಣಿಸಿಕೊಂಡ್ರು ಥಿಯೇಟರ್ ಗೆ ಎಂಟ್ರಿಕೊಡೋ ಹಾಗಿಲ್ಲ. ಥಿಯೇಟರ್ ಜೊತೆ ಈಜುಕೊಳ ಹಾಗೂ ಜಿಮ್​ಗೂ 100% ಆಕ್ಯೂಪೆನ್ಸಿಗೆ ಅವಕಾಶ ನೀಡಿದ್ದು ಇಲ್ಲೂ ಇದೇ ಶರತ್ತುಗಳು ಅನ್ವಯಿಸುತ್ತೆ.

ಥಿಯೇಟರ್​ನಲ್ಲಿ 100% ಆಸನಗಳ ಭರ್ತಿಗೆ ಅವಕಾಶ ನೀಡುತ್ತಿದ್ದಂತೆ ಒಂದೊಂದೇ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿ ನಿಂತಿವೆ. ಸ್ಟಾರ್ ನಟರ ದುಬಾರಿ ಬಜೆಟ್ ನ ಚಿತ್ರಗಳು ಪೈಪೋಟಿಗೆ ಬಿದ್ದವರಂತೆ ಬಿಡುಗಡೆಯಾಗಲಿವೆ. ಇತ್ತ ಅಭಿಮಾನಿಗಳು ಕೂಡ ಯಾವ ಸಿನಿಮಾ ನೋಡೋದು ಅನ್ನೋ ಗೊಂದಲದಲ್ಲಿದ್ದಾರೆ. ಒಟ್ಟಾರೆಯಾಗಿ ಸರ್ಕಾರ ನೀಡಿರುವ 100% ಆಕ್ಯೂಪೆನ್ಸಿ ಇಂದ ಚಿತ್ರರಂಗ ನೆಮ್ಮದಿಯಾಗಿ ನಿಟ್ಟುಸಿರು ಬಿಡುವಂತಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button