Breaking NewsLatestವಿದೇಶಸುದ್ದಿ
Tourist Plane Crashes : ಪ್ರವಾಸಿ ವಿಮಾನ ಪತನ : ಏಳು ಮಂದಿ ದುರ್ಮರಣ

ಪೆರು : ಪ್ರಸಿದ್ಧ ಪ್ರವಾಸಿ ತಾಣ ಪೆರುವಿನ ನಾಜ್ಕಾಲೈನ್ ನಲ್ಲಿ ಟೂರಿಸ್ಟ್ ವಿಮಾನವೊಂದು ಪತನಗೊಂಡು 7 ಜನರು ಸಾವನ್ನಪ್ಪಿದ್ದಾರೆ.
ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ವಿಮಾನ ಪತನಗೊಂಡಿದೆ. ಇಬ್ಬರು ಸಿಬ್ಬಂದಿಗಳು, ಐವರು ಪ್ರವಾಸಿಗರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೆರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏರ್ ಸಾಂಟೋಸ್ ಕಂಪನಿಗೆ ಸೇರಿದ ವಿಮಾನ ಇದ್ದಾಗಿದ್ದು ಸೆಸ್ನಾ 207 ಸಿಂಗಲ್ ಇಂಜಿನ್ ವಿಮಾನವಾಗಿದೆ
