ಮನರಂಜನೆಸಿನಿಮಾಸೆಲೆಬ್ರಿಟಿ

ಎರಡನೇ ಮದುವೆ ಸಂಭ್ರಮದಲ್ಲಿ ಫರ್ಹಾನ್ ಅಖ್ತರ್: ನಟಿ ಶಿಬಾನಿ ಜೊತೆ ಕಲ್ಯಾಣ

ಬಾಲಿವುಡ್​ನಲ್ಲಿ ಮಂಗಳ ವಾದ್ಯದ ಸದ್ದು ಮತ್ತೆ ಶುರುವಾಗಿದ್ದೆ. ಕತ್ರಿನಾ ಕೈಫ್- ವಿಕ್ಕಿ ಕೌಶಲ್, ಮೌನಿ ರಾಯ್-ಸೂರಜ್ ನಂಬಿಯಾರ್, ರಾಜ್​ಕುಮಾರ್ ರಾವ್-ಪತ್ರಲೇಖ ಬಳಿಕ ಇದೀಗ ಬಾಲಿವುಡ್​ನ ಮತ್ತೊಂದು ತಾರಾ ಜೋಡಿ ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಾಂಡೇಕರ್ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ಮದುವೆಯ ಮೆಹೆಂದಿ ಸಮಾರಂಭ ಮುಂಬೈನಲ್ಲಿ ಗುರುವಾರ ನಡೆದಿದೆ. ಮುಂಬೈನಲ್ಲಿರುವ ಫರಾನ್ ಅಖ್ತರ್ ಮನೆಯಲ್ಲೇ ಮೆಹೆಂದಿ ಶಾಸ್ತ್ರಗಳು ನೆರವೇರಿದ್ದು ಎರಡು ಮನೆಯಲ್ಲಿ ಈಗಾಗಲೇ ಸಂಭ್ರಮ ಶುರುವಾಗಿದೆ. ಮೆಹೆಂದಿ ಕಾರ್ಯಕ್ರಮದಲ್ಲಿ ಶಬಾನಾ ಅಜ್ಮಿ, ಶಿಬಾನಿ ಸಹೋದರಿ ಅನುಷಾ ದಾಂಡೇಕರ್, ರಿಯಾ ಚಕ್ರವರ್ತಿ, ಅಮೃತ ಅರೋರಾ ಸೇರಿದಂತೆ ಸಾಕಷ್ಟು ತಾರೆಯರು ಭಾಗಿಯಾಗಿದ್ದಾರೆ.

ಮೂಲಗಳ ಪ್ರಕಾರ ಫರ್ಹಾನ್ ಹಾಗೂ ಶಿಬಾನಿ ಫೆಬ್ರವರಿ 21ರಂದು ವಿವಾಹ ಆಗಲಿದ್ದಾರೆ. ಫರ್ಹಾನ್ ಹಾಗೂ ಶಿಬಾನಿ ಸತತ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು ಇದೀಗ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಸಿಂಪಲ್ ಆಗಿ ಮದುವೆಯಾಗ್ತಿದ್ದಾರೆ ಈ ಜೋಡಿ ಹಕ್ಕಿಗಳು. ಕುಟುಂಬ ಸದಸ್ಯರು ಹಾಗೂ ಕೆಲ ಆಪ್ತರು ಮಾತ್ರ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರಂತೆ.

ನಟ ಫರ್ಹಾನ್ ಅಖ್ತರ್​ಗೆ ಇದು ಎರಡನೇ ಮದುವೆ. ಈ ಹಿಂದೆ ಅಧುನಾ ಬಬಾನಿ ಎಂಬುವವರ ಜೊತೆ ವಿವಾಹವಾಗಿದ್ದ ಫರ್ಹನ್ 2017ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. 2018ರಿಂದ ಶಿಬಾನಿ ಜೊತೆ ಪ್ರೀತಿಯಲ್ಲಿರೋ ಫರ್ಹಾನ್ ನಾಲ್ಕು ವರ್ಷಗಳ ಬಳಿಕ ಮದುವೆ ಆಗ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button