ಮನರಂಜನೆಸಿನಿಮಾಸೆಲೆಬ್ರಿಟಿ

ಯುವ ನಟಿಗೆ ಮತ್ತಿನಲ್ಲಿ ಮುತ್ತುಕೊಟ್ಟ RGV

ನಿರ್ದೇಶಕ ರಾಮ್​ಗೋಪಾಲ್ ವರ್ಮಾಗೂ ವಿವಾದಗಳಿಗೂ ಬಿಡದ ನಂಟು. ಸದಾ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗಿ ವಿವಾದ ಮೈಮೇಲೆ ಎಳೆದುಕೊಳ್ಳುವ ಆರ್​ಜಿವಿ ಇದೀಗ ನಟಿಯೊಬ್ಬರಿಗೆ ಚುಂಬಿಸಿದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಅಲ್ಲದೆ ಫೋಟೋಗೆ ಟೈಟಲ್ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಕೊಡೊದಾಗಿ ಘೋಷಿಸಿದ್ದಾರೆ.

ಆರ್​ಜಿವಿಗೆ ಹುಡುಗಿಯರು, ಪಾರ್ಟಿ, ವಿವಾದಗಳು ಹೊಸದೇನು ಅಲ್ಲ. ಆಗಾಗ ನಟಿಯರ ಜೊತೆ ಪಾರ್ಟಿ ಮಾಡಿ ಫೋಟೋಗಳನ್ನ ಶೇರ್ ಮಾಡ್ತಾನೆ ಇರ್ತಾರೆ. ಇದೀಗ ವರ್ಮಾ ಪಾರ್ಟಿಯಲ್ಲಿ ಮದ್ಯಪಾನ ಮಾಡಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ನಟಿಯೊಬ್ಬರನ್ನ ತಬ್ಬಿಕೊಂಡು ಚುಂಬಿಸಿದ್ದಾರೆ. ಪಾರ್ಟಿಯ ಪೋಟೋಗಳನ್ನ ಒಂದರ ಹಿಂದೊದಂತೆ ಶೇರ್ ಮಾಡಿಕೊಂಡು ಆ ಫೋಟೋಗೆ ಟೈಟಲ್ ಕೊಟ್ಟವರಿಗೆ ಹಣ ನೀಡುವುದಾಗಿ ಹೇಳಿದ್ದಾರೆ. ಆರ್​ಜಿವಿ ಫೋಟೋ ನೋಡಿದ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

`ನನ್ನ ಅಭಿಮಾನಿಗಳು ಹಾಗೂ ನನ್ನ ವಿರೋಧಿಗಳಲ್ಲಿ ಮನವಿ. ಈ ಪೊಟೋಗಳಿಗೆ ಶೀರ್ಷಿಕೆ ಕೊಡಿ. ಅತ್ಯುತ್ತಮ ಶೀರ್ಷಿಕೆ ಕೊಟ್ಟವರಿಗೆ 1 ಲಕ್ಷ ಸಿಗುತ್ತದೆ’ ಎಂದು ಆರ್​ಜಿವಿ ಟ್ವೀಟ್ ಮಾಡಿದ್ದಾರೆ. ಆರ್​​ಜಿವಿ ಟ್ವೀಟ್​ಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ.

ಆರ್​ಜಿವಿ ಜೊತೆ ಪಾರ್ಟಿಯಲ್ಲಿ ಇದ್ದ ನಟಿ ಯಾರು ಅನ್ನೋದನ್ನ ನೆಟ್ಟಿಗರು ಸಾಕಷ್ಟು ಸರ್ಚ್ ಮಾಡಿದ್ರು. ಅಂದ್ಹಾಗೆ ಆರ್​ಜಿವಿ ಪಾರ್ಟಿಯ ಮತ್ತಿನಲ್ಲಿ ಮುತ್ತುಕೊಟ್ಟಿದ್ದು ಆಂಧ್ರದ ಯುವ ನಟಿ ಇನಯಾ ಸುಲ್ತಾನಾಗೆ. ಟಾಲಿವುಡ್​ನಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇನಯಾ ಬುಜ್ಜಿ ಇಲಾ ರಾ ಎನ್ನುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಇದೇ ನಟಿಯೊಂದಿಗೆ ಕೆಲವು ತಿಂಗಳ ಹಿಂದೆ ಆರ್​ಜಿವಿ ಡ್ಯಾನ್ಸ್ ಮಾಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button