ಮನರಂಜನೆಸಿನಿಮಾಸೆಲೆಬ್ರಿಟಿ

ಕೊರೊನಾ ಇಲ್ಲ, ಇದು ಮೆಡಿಕಲ್ ಮಾಫಿಯಾ: ಅಗ್ನಿ ಶ್ರೀಧರ್

ದೇಶದಾದ್ಯಂತ ಕೊರೊನಾ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ಮುಂದುವರೆಸಿದೆ. ಕೋವಿಡ್ ಇದೆ, ಇಲ್ಲ ಅನ್ನೋ ಚರ್ಚೆಗಳು ಆರಂಭದಿಂದಲೂ ಇದ್ದು ಇದೀಗ ನಿರ್ದೇಶಕ ಹಾಗೂ ಚಿತ್ರಕಥೆ ಬರಹಗಾರ ಅಗ್ನಿ ಶ್ರೀಧರ್ ಅವರ ಹೇಳಿಕೆ ಸಂಚಲನ ಮೂಡಿಸಿದೆ.

ಕೊರೊನಾ ಎಂಬುದು ಸುಳ್ಳು. ಇದೊಂದು ಮೆಡಿಕಲ್ ಮಾಫಿಯಾ. ನಾನು ಇದುವರೆಗೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಎದುರು ನಾನು ಇದನ್ನೇ ಹೇಳಿದ್ದೇನೆ. ರಾಜಕಾರಣಿಗಳು ತಳ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಎಂದು ಅಗ್ನಿ ಶ್ರೀಧರ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಕೊರೊನಾ ಇದೆ, ಇಲ್ಲ ಎಂಬ ಚರ್ಚೆ ಆರಂಭದಿಂದಲೂ ಇದ್ದು ಇದು ಹಣ ಮಾಡಿಕೊಳ್ಳುವ ದಂಧೆ ಎಂಬ ಮಾತು ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೆ ಇದೀಗ ಅಗ್ನಿ ಶ್ರೀಧರ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕೋವಿಡ್ ಕಾರಣದಿಂದ ಸಿನಿಮಾ ರಂಗ ತತ್ತರಿಸಿ ಹೋಗಿದೆ. ಒಂದು ಕಡೆ ವೀಕೆಂಡ್ ಕಫ್ಲ್ಯೂ ಮತ್ತೊಂದು ಕಡೆ ಚಿತ್ರಮಂದಿರದಲ್ಲಿ ಶೇಖಡ 50 ಆಸನಗಳ ಭರ್ತಿಗೆ ಅವಕಾಶ ನೀಡಿರೋದ್ರಿಂದ ಸಾಕಷ್ಟು ಸಿನಿಮಾಗಳ ರಿಲೀಸ್​ ಡೇಟ್​ನ ಮುಂದೂಡಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button