Breaking NewsLatestಆರೋಗ್ಯರಾಷ್ಟ್ರೀಯಸುದ್ದಿ
ದೇಶಾದ್ಯಂತ 3 ಕೋಟಿ ಮಕ್ಕಳಿಗೆ ಲಸಿಕೆ: ಕೇಂದ್ರ ಸಚಿವ ಮಾಂಡವೀಯ

ನವದೆಹಲಿ : ದೇಶದಲ್ಲಿ 15 ರಿಂದ 18 ವಯೋಮಾನದವರ ಪೈಕಿ ಈವರೆಗೆ 3 ಕೋಟಿ ಮಕ್ಕಳು ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಲಸಿಕೆ ಪಡೆಯುವ ವಿಚಾರದಲ್ಲಿ ಯುವಕರು ಹೆಚ್ಚಿನ ಉತ್ಸಾಹ ತೋರಿಸುತ್ತಿರುವುದು ಅಶಾದಾಯಕ ಸಂಗತಿಯಾಗಿದೆ ಎಂದಿದ್ದಾರೆ.
ಎಲ್ಲಾ ಅರ್ಹ ಮಕ್ಕಳು ತಪ್ಪದೇ ಲಸಿಕೆ ಪಡೆಯುವಂತೆಯೂ ಸಚಿವರು ಮನವಿ ಮಾಡಿದ್ದಾರೆ. ಇದೇ ತಿಂಗಳ 3 ರಿಂದ 15ರಿಂದ 18 ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಇದೇ 10 ರಿಂದ ಆರೋಗ್ಯ ಕಾರ್ಯಕರ್ತರು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟು ಜೊತೆಗೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದೆ.
