ಮಗಳ ವಿಚ್ಛೇದನದ ಬಳಿಕ ಕುಗ್ಗಿ ಹೋದ ಸೂಪರ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ 71ನೇ ವಯಸ್ಸಿನಲ್ಲೂ ಸದಾ ಲವ ಲವಿಕೆಯಿಂದಿರೋ ನಟ. ಈ ವಯಸ್ಸಿನಲ್ಲೂ ಚಿರ ಯುವಕರು ನಾಚುವಂತ ಸ್ಟಂಟ್ ಮಾಡೋ ರಜನಿಕಾಂತ್ ಇಂದಿಗೂ ಚಿತ್ರರಂಗದ ಸಾಕಷ್ಟು ಬೇಡಿಕೆ ಇಟ್ಟುಕೊಂಡಿದ್ದಾರೆ. ಯಾವಾಗಲು ಸಖತ್ ಆಕ್ಟೀವ್ ಆಗಿರುವ ನಟ ರಜನಿಕಾಂತ್ ಇದೀಗ ಮಗಳು, ಅಳಿಯ ಬೇರೆ ಬೇರೆಯಾಗಿರೋದ್ರಿಂದ ಮಾನಸೀಕವಾಗಿ ಕುಗ್ಗಿ ಹೋಗಿದ್ದಾರಂತೆ.
ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಹಾಗೂ ನಟ ಧನುಷ್ ಬೇರೆ ಬೇರೆಯಾಗ್ತಿರೋದಾಗಿ ಇದೇ ತಿಂಗಳ 17ರಂದು ತಿಳಿಸಿದ್ದರು. ಸೋಷಿಯಲ್ ಮೀಡಿಯಾದ ಮೂಲಕ ತಾವಿಬ್ಬರು ಬೇರೆ ಬೇರೆಯಾಗ್ತಿರೋದಾಗಿ ಈ ಜೋಡಿಗಳು ಸ್ಪಷ್ಟಪಡಿಸಿದ್ದರು. ಇದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿತ್ತು. ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು 18 ವರ್ಷದ ಬಳಿಕ ಬೇರೆ ಬೇರೆಯಾಗ್ತಿರೋದು ಅವ್ರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಇದೀಗ ಮಗಳ ವಿಚ್ಛೇದನದ ಬಳಿಕ ನಟ ರಜನಿಕಾಂತ್ ಕುಗ್ಗಿ ಹೋಗಿರೋದಾಗಿ ಅವರ ಆಪ್ತ ವಲಯಗಳು ತಿಳಿಸಿವೆ.
ರಜನಿಕಾಂತ್ ಕಳೆದ ಕೆಲ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ರಜನಿ ಸಾಕಷ್ಟು ದಿನಗಳ ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ರು. ಇದೇ ಕಾರಣಕ್ಕೆ ರಾಜಕೀಯದಿಂದಲೂ ರಜನಿಕಾಂತ್ ದೂರವೇ ಉಳಿದಿದ್ದಾರೆ. ಇದೀಗ ಮಗಳ ಕೌಟುಂಬಿಕ ಜೀವನ ಮುರಿದು ಬಿದ್ದಿರೋದ್ರಿಂದ ಮತ್ತಷ್ಟು ನೊಂದಿರುವ ನಟ ರಜನಿಕಾಂತ್ ಇದೇ ನೋವಿನಲ್ಲಿದ್ದಾರಂತೆ. ಇದು ರಜನಿಕಾಂತ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆಯಾ ಅನ್ನೋ ಆತಂಕದಲ್ಲಿದ್ದಾರೆ ತಲೈವರ ಅಭಿಮಾನಿಗಳು.
ಮಗಳು ಅಳಿಯ ದೂರವಾಗಿರೋದ್ರಿಂದ ನೊಂದುಕೊಂಡಿರೋ ರಜನಿಕಾಂತ್ ಇಬ್ಬರನ್ನೂ ಒಂದು ಮಾಡೋ ಪ್ರಯತ್ನ ಮಾಡ್ತಿದ್ದಾರಂತೆ. ಇದೇ ಕಾರಣಕ್ಕೆ ಮಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರಂತೆ. ಅಲ್ಲದೆ ಧನುಷ್ ತಂದೆ ಕಸ್ತೂರಿ ರಾಜ ಕೂಡ ಇಬ್ಬರದ್ದು ತಾತ್ಕಾಲಿಕ ಕಲಹ ಅಷ್ಟೇ, ಇಬ್ಬರು ಮತ್ತೆ ಒಂದಾಗುವುದಾಗಿ ಹೇಳಿದ್ದಾರೆ. ಹೀಗಾಗಿ ಈ ಜೋಡಿಗಳು ಮತ್ತೆ ಒಂದಾಗಲಿ, ವೈಮನಸ್ಸು ಮರೆತು ಅನ್ಯೋನ್ಯವಾಗಿ ಜೀವನ ನಡೆಸಲಿ ಅಂತಿದ್ದಾರೆ ಅವರ ಅಭಿಮಾನಿಗಳು.




