ಮನರಂಜನೆಸಿನಿಮಾಸೆಲೆಬ್ರಿಟಿ

ಸೂಸೈಡ್ ಯೋಚನೆ ಮಾಡಿದ್ರಂತೆ ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಮಾಕ್ಟೇಲ್ 2 ಸಿನಿಮಾ ಫೆಬ್ರವರಿ 11ರಂದು ತೆರೆಗೆ ಬರ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಅದ್ದೂರಿಯಾಗಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೇ ವೇಳೆ ವೇದಿಕೆ ಮೇಲೆ ನಟ ಕಂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಭಾವುಕರಾಗಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾ ಯಾರು ನಿರೀಕ್ಷಿಸಿರಿದ ಮಟ್ಟಿಗಿನ ಯಶಸ್ಸಿ ಗಳಿಸಿತ್ತು. ಇದೇ ಕಾರಣಕ್ಕೆ ಲವ್ ಮಾಕ್ಟೇಲ್ 2 ಸಿನಿಮಾಗಾಗಿ ಪ್ರತಿಯೊಬ್ಬರು ಕಾಯ್ತಿದ್ದಾರೆ. ಆದರೆ ಇಂತಹ ಅದ್ಭುತ ಸಿನಿಮಾದ ಹಿಂದೆ ಇರುವ ನೋವಿನ ಸಂಗತಿಯನ್ನ ಕೃಷ್ಣ ಬಿಚ್ಚಿಟ್ಟಿದ್ದಾರೆ.

ಸಿನಿಮಾ ಶುರು ಮಾಡಿದಾಗ ನಮ್ಮ ಬಳಿ ಹಣ ಇರಲಿಲ್ಲ. ತಂದೆಯಿಂದ 4-5 ಲಕ್ಷ ರೂ.ಸಾಲ ತೆಗೆದುಕೊಂಡಿದ್ದೆ. ಮಿಲನಾ ಅವ್ರು ಸಣ್ಣ ಪುಟ್ಟ ಪ್ರಾಜೆಕ್ಟ್​ಗಳನ್ನ ಒಪ್ಪಿಕೊಳ್ಳುತ್ತಿದ್ದರು. ಅದರಿಂದ 10-15 ಸಾವಿರ ಬರುತ್ತಿತ್ತು. ಅದನ್ನು ಕೂಡಿಸಿ ಸಿನಿಮಾ ಮಾಡಿದೆವು.

ನಮ್ಮ ಒಂದು ದಿನದ ಚಿತ್ರೀಕರಣಕ್ಕೆ 20-30 ಸಾವಿರ ಖರ್ಚು ಬರುತ್ತಿತ್ತು. ಹೀಗಾಗಿ ನಮ್ಮ ಸಿನಿಮಾದಲ್ಲಿ ಯಾವುದೇ ಅಸಿಸ್ಟೆಂಟ್ ಡೈರೆಕ್ಟರ್ ಇರಲಿಲ್ಲ. ಜೊತೆಗೆ ಮೇಕಪ್ ಆರ್ಟಿಸ್ಟ್ ಸಹ ಇರಲಿಲ್ಲ. ನಾವೇ ಎಲ್ಲಾ ಮಾಡಿಕೊಂಡಿರುವುದು. ಫೈಟ್ ಮಾಸ್ಟರ್​ಗೆ ಸಂಭಾವನೆ ಕೊಡುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ಹೀಗಾಗಿ ನಾನೇ ಕಲಿತಿದ್ದ ಫೈಟ್​ನ ಬಳಸಿಕೊಂಡು ಸಿನಿಮಾ ಮಾಡಿದ್ದಾಗಿ ಹೇಳಿದ್ದಾರೆ.

ನಮಗೆ ಸಿಕ್ಕ ಸ್ಕ್ರೀನ್​ನಿಂದ ಮೊದಲ ವಾರ ಕಲೆಕ್ಷನ್ ಸರಿಯಾಗಿ ಆಗಲಿಲ್ಲ. ಎರಡನೇ ವಾರ ಸ್ಕ್ರೀನ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮನೆಯಲ್ಲಿ 40 ಲಕ್ಷ ಸಾಲ ಮಾಡಿದ್ದೆ. ಅಂದು ಮನೆಯಲ್ಲಿ ನಾನು ಒಬ್ಬನೆ ಇದ್ದೆ. ಮಿಲನಾ ಎಲ್ಲಿಯೋ ಹೋಗಿದ್ದರು. ಆಗ ನಾನು ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ. ನಾನು ದೇವರನ್ನೇ ಪ್ರಶ್ನಿಸಿದ್ದೆ. 2013ರಿಂದ ಸಿನಿಮಾ ಮಾಡ್ತಾ ಇದ್ದೀನಿ. ಏನು ಆಗುತ್ತಿಲ್ಲ ಅಂತ ಬೇಸರವಿತ್ತು. ಒಂದು ಕಡೆ ಲೈಫ್ ಮುಗಿಯಿತು ಸಿನಿಮಾ ಮಾಡೋದು ಬೇಡ ಅಂತ ಸೂಸೈಡ್ ಮಾಡಿಕೊಳ್ಳೋಣ ಎಂದು ಯೋಚನೆ ಬರುತ್ತಿಲ್ಲ. ಆದ್ರೆ ಮಿಲನಾ ಮುಖ ನೆನಪು ಬರುತ್ತಿತ್ತು ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button