ಸಿನಿಮಾಸೆಲೆಬ್ರಿಟಿ
ತಲೆ ಕೆಟ್ಟ ಯಬಡ ತಬಡ ಬರ್ತ್ಡೇ!

ಪೂರ್ಣ ವಿ- ರಾಮ
ಯೋಗರಾಜ್ ಭಟ್ ಸದಾ ಕ್ರಿಯೇಟಿವ್ ಆಗಿಯೇ ಏನೋ ಒಂದನ್ನು ಹೊರತರಲು ಯೋಚಿಸುತ್ತಾರೆ ಅನ್ನುವುದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬದ ಪ್ರಯುಕ್ತ ಗಾಳಿಪಟ 2 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಭಟ್ಟರು, ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆಯುವ ಬದಲು ಹುದ್ದಿಟ ಹಬ್ಬಹ ಶುಶಾಭಯ ಎಂದು ಬರೆಯುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ!
ಹಿಂದೆಯೂ ಹಾಗೆ ಬರೆದಿದ್ದರು!
ಅನಂತನಾಗ್ ಅವರ ಜನುಮ ದಿನದಂದೂ ಇದೇ ರೀತಿ ಮಿಸ್ಟೇಕ್ ಮಾಡಿದಂತೇ ಬರೆದು, ಕುತೂಹಲ ಮೂಡಿಸಿದ್ದರು. ಮೊದಮೊದಲು ಜನರು ಭಟ್ಟರಿಗೆ ತಲೆ ಕೆಟ್ಟು ಯಬಡ ತಬಡ ಆಗಿದೆಯಾ ಎಂದು ಕಿಂಡಲ್ ಮಾಡಿದ್ದರು. ಕನ್ನಡ ಭಾಷೆಗೆ ಇದು ಅವಮಾನ ಎಂದು ಕೆಲವರು ಕಾಮೆಂಟಿಸಿದ್ದರು. ಕೊನೆಗದು ಯೋಗರಾಜ್ ಭಟ್ಟರ ವಿಕಟತ್ವದ ಪರಮಾವಧಿ ಅಂತ ಗೊತ್ತಾಗಿ ಹಲ್ಲು ಕಿರಿದು ಸುಮ್ಮನಾಗಿದ್ದರು!




