ಅರಳಿತು ಯಶ್ ರಾಧಿಕಾ ‘ಮೊಗ್ಗಿನ’ ಮನೆ!

ಪೂರ್ಣ ವಿ-ರಾಮ
ಇದನ್ನು ಕಾಕತಾಳಿಯ ಎಂದರೂ ತಪ್ಪಿಲ್ಲ. ಅವರು ತಮ್ಮ ಕರಿಯರ್ ಶುರುಮಾಡಿದ್ದು ನಂದಗೋಕುಲ ಎಂಬ ಸೀರಿಯಲ್ ಮೂಲಕ. ಇದೀಗ ಅದೇ ಯಶ್-ರಾ ಜೋಡಿ ಹೊಚ್ಚ ಹೊಸ ನಂದಗೋಕುಲದಂಥ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ.
ಹೌದು, ಯಶ್ ಇದೀಗ ಹೊಸ ಅಪಾರ್ಟ್ ಮೆಂಟ್ ಖರೀದಿ ಮಾಡಿದ್ದಾರೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಬಳಿ ಇರುವ ಪ್ರಿಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಒಂದನ್ನು ಪರ್ಚೇಸ್ ಮಾಡಿ, ಸಿಂಪಲ್ ಎಂಡ್ ಸ್ವೀಟಾಗಿ ಗೃಹಪ್ರವೇಶ ಮಾಡಿದ್ದಾರೆ. ತೀರಾ ಹತ್ತಿರದ ಖಾಸಗೀ ಸ್ನೇಹಿತರು ಮತ್ತು ಸಂಬಂಧಿಕರಿಗಷ್ಟೇ ಆಹ್ವಾನವಿತ್ತು, ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಕೋವಿಡ್ ಸಿಚುವೇಷನ್ ಇರುವ ಕಾರಣಕ್ಕೆ ಅದ್ದೂರಿ ಸಮಾರಂಭ ಹಮ್ಮಿಕೊಳ್ಳದೇ ಸರಳ ರೀತಿಯಲ್ಲಿ ಕಾರ್ಯಕ್ರಮ ಮಾಡಿಮುಗಿಸಿದ್ದಾರೆ.
ಅಚ್ಚುಕಟ್ಟಾದ ಅದ್ದೂರಿ ಮನೆ!
ಯಶ್ ಹಾಗೂ ರಾಧಿಕಾ ಆ ಮನೆಯ ಒಂದಷ್ಟು ಝಲರ್ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ಸಿಂಗಾರಗೊಂಡಿರೋ ಸುಸಜ್ಜಿತ ನಿವಾಸದ ಒಂದಷ್ಟು ಭಾವಚಿತ್ರಗಳನ್ನು, ಪೂಜೆ ಪುನಸ್ಕಾರ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಯಶ್ ಅಪ್ಪ ಅಪ್ಪ ಅಮ್ಮ ಕೂಡ ಆರತಿ ಬೆಳಗುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಇದೆಲ್ಲದರ ಜೊತೆಗೆ ಯಶ್ ಮೊಗದಲ್ಲಿ ವಿಶೇಷ ಸಂಭ್ರಮ ಕಾಣುತ್ತಿದೆ. ರಾಧಿಕಾ ಕೂಡ ಅಷ್ಟೇ ಸಂಭ್ರಮದಿಂದ ನಸುನಕ್ಕಿದ್ದಾರೆ. ಇಬ್ಬರೂ ಇದೇ ಶುಭ ಘಳಿಗೆಯಲ್ಲಿ ಹಾರ ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ!




