ತೈಲ ಕಂಪನಿಗೆ 100 ಕೋಟಿ ರೂ. ಹೂಡಲಿರುವ ನಯನಾ ತಾರಾ..!

ಬಹುಭಾಷಾ ನಟಿ ನಯನಾತಾರಾಗೆ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದರೂ ಕೂಡ ಅದರ ಚಾರ್ಮ್ ಸ್ವಲ್ಪನೂ ಕಡಿಮೆಯಾಗಿಲ್ಲ. ಈಗಲೂ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಅವರ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ. ಅಷ್ಟೊಂದುಡಿಮ್ಯಾಂಡ್ ಇರುವ ನಯನಾ ತಾರಾಗೆ ಒಳ್ಳೆಯ ಸಂಭಾವನೆ ಸಿಗುತ್ತದೆ.
ಸಿನಿಮಾ ಮತ್ತು ಜಾಹೀರಾತುಗಳಿಂದ ಕೋಟ್ಯಂತರ ಹಣಗಳಿಸುವವರು, ಬೇರೆ ಉದ್ಯಮದಲ್ಲೂ ಆಸಕ್ತಿ ಹೊಂದಿದ್ದಾರೆ. ಇತ್ತಿಚೆಗೆ ಹೆಚ್ಚು ಬ್ಯುಸಿನೆಸ್ ಕಡೆ ಗಮನ ಹರಿಸುತ್ತಿರುವ ನಯನಾ ತಾರಾ ಅವರು, ಈಗ ತೈಲ ಕಂಪನಿಗೊಂದು ಹಣ ಹೂಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಕ್ಕಾಗಿ ಅವರು ದುಬೈಗೆ ಹಾರಿದ್ದಾರೆ.
ದುಬೈನ ತೈಲ ಕಂಪನಿಯಲ್ಲಿ ಜಂಟಿಯಾಗಿ ಬರೋಬ್ಬರಿ 100 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭಾವಿ ಪತಿಯಾಗಲಿರುವ ವಿಘ್ನೇಶ್ ಜೊತೆ ನಟಿ ನಯನಾ ತಾರಾ ದುಬೈಗೆ ಪ್ರವಾಸಕ್ಕೆ ಅಂತಾ ತೆರಳಿದ್ದರು.ಆಗಾ ಈ ವಿಚಾರವಾಗಿ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ.




