ಮನರಂಜನೆಸಿನಿಮಾಸೆಲೆಬ್ರಿಟಿ

ಅರುಂಧತಿಗೆ 13ರ ಸಂಭ್ರಮ, ಧನ್ಯವಾದ ತಿಳಿಸಿದ ಅನುಷ್ಕಾ

ತೆಲುಗು ಚಿತ್ರರಂಗದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಎಂಥದ್ದೇ ಪಾತ್ರಗಳನ್ನ ನೀಡಿದರು ಲೀಲಾಜಾಲವಾಗಿ ನಟಿಸಬಲ್ಲ ನಟಿ. ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಕನ್ನಡತಿಯ ಅಭಿನಯಕ್ಕೆ ಇಡೀ ಭಾರತೀಯ ಚಿತ್ರರಂಗವೇ ತಲೆ ದೂಗಿದೆ. ಅನುಷ್ಕಾ ಶೆಟ್ಟಿಯ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಸಿನಿಮಾವೊಂದು ಹದಿಮೂರು ವರ್ಷ ಪೂರೈಸಿದ್ದು ಈ ಬಗ್ಗೆ ಅನುಷ್ಕಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೂಪರ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಅನುಷ್ಕಾ ಶೆಟ್ಟಿಗೆ ಸಾಕಷ್ಟು ಹೆಸ್ರು ತಂದುಕೊಟ್ಟಿದ್ದು 2009ರಲ್ಲಿ ತೆರೆಕಂಡ ಅರುಂಧತಿ ಸಿನಿಮಾ. ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರ ಥಿಯೇಟರ್​ನಲ್ಲಿ ಭಾರಿ ಸದ್ದು ಮಾಡಿತ್ತು. ಚಿತ್ರ ರಿಲೀಸ್ ಆಗಿ ಹದಿನೈದು ವರ್ಷ ಕಳೆದಿದ್ದರು ಇಂದಿಗೂ ಈ ಚಿತ್ರ ಸಿನಿ ಪ್ರಿಯರ ಫೇವರೆಟ್ ಚಿತ್ರವಾಗಿ ಉಳಿದುಕೊಂಡಿದೆ.

ಅರುಂಧತಿ ಚಿತ್ರಕ್ಕೆ ಹದಿಮೂರು ವರ್ಷ ಕಳೆದ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಪಾತ್ರ ಜೇಜಮ್ಮ. ಅಂಥ ಅವಕಾಶ ಪಡೆದಿದ್ದಕ್ಕೆ ನಾನು ಧನ್ಯಳು. ಕೋಡಿ ರಾಮಕೃಷ್ಣ, ನಿರ್ಮಾಪಕ ಶ್ಯಾಮ್ ಪ್ರಸಾದ್ ಮತ್ತು ಇಡೀ ಚಿತ್ರ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಪ್ರೇಕ್ಷಕರ ಬೆಂಬಲಕ್ಕೆ ದೊಡ್ಡ ಧನ್ಯವಾದ. ಈ ಸಿನಿಮಾ ಯಾವಾಗಲೂ ನನ್ನ ಮನಸ್ಸಿಗೆ ಹತ್ತಿರವಾಗಿರಲಿದೆ ಎಂದು ಬರೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button