ಸಿನಿಮಾಸೆಲೆಬ್ರಿಟಿ
ಮಹಾರಾಷ್ಟ್ರದ ಪ್ರವಾಹ ಪೀಡಿತರ ನೆರವಿಗೆ ನಿಂತ ನಟ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಅವರು ಕಳೆದ ವರ್ಷದಿಂದ ಹಲವಾರು ಕೋವಿಡ್ 19 ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೇ ಇತ್ತೀಚೆಗೆ ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರಿಗೆ ಬೆಂಬಲವನ್ನು ನೀಡುತ್ತಿದ್ದಾರೆ.
ಮಹಾರಾಷ್ಟ್ರದ ಹಲವು ಜಿಲ್ಲೆಗಳು ಪ್ರವಾಹದಿಂದ ನಾಶವಾಗಿವೆ. ಹಾಗಾಗಿ ಮೂಲಭೂತ ಅವಶ್ಯಕತೆಗಳಿಲ್ಲದೆ ಆಂತರಿಕ ಪ್ರದೇಶಗಳಲ್ಲಿ ಸಿಲುಕಿದ ಜನರಿಗೆ ನಟ ಸಹಾಯ ಮಾಡುತ್ತಿದ್ದಾರೆ. ಇವರು ಚಿಪ್ಲುನ್ , ಮಹದ್ ಮತ್ತು ಇತರ ಆಂತರಿಕ ಪ್ರದೇಶಗಳಿಗೆ ಪರಿಹಾರ ಪ್ಯಾಕೇಜ್ ಗಳನ್ನು ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ಸೋನು ಸೂದ್ ಮತ್ತು ಅವರ ತಂಡ ಒಳ ಗ್ರಾಮಗಳನ್ನು ತಲುಪಲು ಕೈಲದಷ್ಟು ಪ್ರಯತ್ನಿಸುತ್ತಿದೆ. ಕ್ಷೇತ್ರಪಾಲ್, ರುದ್ರಾಣಿ, ದೊಂಡಶಿ ಮತ್ತು ಹಲವು ಗ್ರಾಮಗಳು ಇವರಿಂದ ಪರಿಹಾರ ಸಾಮಾಗ್ರಿಗಳನ್ನು ಪಡೆಯುತ್ತಿವೆ. ಇಡೀ ಪ್ರದೇಶದಲ್ಲಿ 1000 ಕ್ಕೂ ಹೆಚ್ಚು ಮನೆಗಳಿಗೆ ಪರಿಹಾರ ಸಾಮಾಗ್ರಿ ನೀಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.




