ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ವಿಶೇಷ ವಿನಂತಿ ಮಾಡಿದ ನಟ ಮಹೇಶ್ ಬಾಬು

ಟಾಲಿವುಡ್ ನಟ ಮಹೇಶ್ ಬಾಬು ಅವರು ಆಗಸ್ಟ್ 9ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷ ಹುಟ್ಟು ಹಬ್ಬದಂದು ‘ಗ್ರೀನ್ ಇಂಡಿಯಾ ಚಾಲೆಂಜ್’ ಅನ್ನು ಸ್ವೀಕರಿಸಿದ ನಟ ಈ ವರ್ಷ ‘ಗೊ ಗ್ರೀನ್’ ಯೋಜನೆಯೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಲಿದ್ದಾರಂತೆ.
ಈ ಹಿನ್ನೆಲೆಯಲ್ಲಿ ಭೂಮಿಯನ್ನು ಬೆಂಬಲಿಸುವ ಸಲುವಾಗಿ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಸ್ವೀಕರಿಸಲು ಮತ್ತು ಪ್ರಪಂಚದಾದ್ಯಂತ ಸಸಿಗಳನ್ನು ನೆಡಲು ತಮ್ಮ ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದನ್ನು ಮಾಡಿದ ನಟ , “ನೀವು ನನ್ನ ಮೇಲೆ ಹೊಂದಿರುವ ಪ್ರೀತಿಯನ್ನು ತೋರಿಸಲು ನನ್ನ ಜನ್ಮದಿನದಂದು ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಬೆಂಬಲಿಸಲು ತಲಾ 3 ಸಸಿಗಳನ್ನು ನೆಡುವಂತೆ ಕೋರಿಕೊಳ್ಳುತ್ತೇನೆ. ನಿಮ್ಮ ಪೋಸ್ಟ್ ಗಳನ್ನು ನನಗೆ ಟ್ಯಾಗ್ ಮಾಡಿ. ಅದನ್ನು ನಾನು ನೋಡುತ್ತೇನೆ ” ಎಂದು ತಿಳಿಸಿದ್ದಾರೆ.
ಗ್ರೀನ್ ಇಂಡಿಯಾ ಸವಾಲನ್ನು ಸಂಸದ ಜೆ. ಸಂತೋಷ ಕುಮಾರ್ ಆರಂಭಿಸಿದ್ದರು. ಇದೀಗ ಸಂಸದರು ಮಹೇಶ್ ಬಾಬು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳಿಗೆ ಗಿಡನೆಡುವ ಮೂಲಕ ಆಚರಿಸಿ ಈ ಸವಾಲಿಗೆ ಬೆಂಬಲ ನೀಡಿದ್ದಕ್ಕೆ ಸಂಸದರು ಮಹೇಶ್ ಬಾಬು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.




