ಸಿನಿಮಾಸೆಲೆಬ್ರಿಟಿ

ಜುಲೈ 6 ಮತ್ತು ಸುದೀಪ್ ಹುಚ್ಚು!

ಪೂರ್ಣ ವಿ-ರಾಮ

ಇದೇ ಜುಲೈ ಆರು ನಟ ಸುದೀಪ್ ಸುಧೀರ್ಘ ಜರ್ನಿಗೆ ದೊಡ್ಡ ಹೆಸರು ತಂದುಕೊಟ್ಟ ದಿನ. ಅವರ ಲೈಫ್ ಟರ್ನ್ ಮಾಡಿದ ದಿನ. ಸುದೀಪ್ ಕರಿಯರ್ ಗೆ ದೊಡ್ಡ ಟರ್ನ್ ತಂದುಕೊಟ್ಟ ದಿನ…! ಹುಚ್ಚ ಬಿಡುಗಡೆಯಾಗಿ ಇಪ್ಪತ್ತು ವರ್ಷ! ಜುಲೈ ೬ ತಮಿಳಿನ ಸೇತು ಚಿತ್ರದ ಕನ್ನಡ ಅವತರಿಣಿಕೆ ಬಿಡುಗಡೆಯಾದ ದಿನ. ಅಲ್ಲಿಯವರೆಗೆ ಇದ್ದ ಸುದೀಪ್ ಇಮೇಜ್ ಅನ್ನು ಅಳಿಸಿಹಾಕಿದ್ದು ಸೇಮ್ ದಿನ. ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದು 2021ರ ಇದೇ ಸು-ದಿನ.

ಹುಡುಗ ಹುಡುಗಿಯರು ಕದ್ದು ಮುಚ್ಚಿ ನೋಡ್ತಿದ್ರು!

ನಿರ್ದೇಶಕ ಓಂ ಪ್ರಕಾಶ್ ಹುಚ್ಚ ಸಿನೆಮಾವನ್ನು ಹಾಗೆ ಕಟ್ಟಿಕೊಟ್ಟಿದ್ದರು. ಅದರಲ್ಲೂ ಕಾಲೇಜು ಹುಡುಗ ಹುಡುಗಿಯರು ಕ್ಲಾಸ್ ಬಂಕ್ ಹಾಕಿ ಥಿಯೇಟರ್ ಗೆ ನುಗ್ಗುತ್ತಿದ್ದರು. ಮನೆಗೆ ಗೊತ್ತಾಗದ ಹಾಗೆ ಸೀಕ್ರೆಟ್ ಆಗಿ ಬಂದು ಸಿನೆಮಾ ನೋಡಿದ್ದರು. ಹೆಣ್ಣು ಮಕ್ಕಳಂತೂ ಸುದೀಪ್ ಹೆಸರು ಮತ್ತು ನವಿಲುಗರಿಯನ್ನ ನೋಟ್ ಬುಕ್ ಒಳಗಡೆ ಬಚ್ಚಿಟ್ಟು ಸಿಕ್ಕಿ ಬಿದ್ದಿದ್ದರು. ಆಗಿನ ಕಾಲದಲ್ಲೇ ಕೋಟಿ ಕೋಟಿ ಬಿಜಿನೆಸ್ ಮಾಡಿದ ಅದೇ ಹುಚ್ಚ ಸಿನೆಮಾ ಇವತ್ತಗೆ ಆರು ಕೋಟಿ ಕಲೆಕ್ಟ್ ಮಾಡಿದೆ ಎಂದರೆ ಹುಚ್ಚ ಸಿನೆಮಾದ ಕ್ವಾಲಿಟಿ ಹೇಗಿತ್ತು ಯೋಚಿಸಿ! ಅದೇ ಹುಚ್ಚ ಸಿನೆಮಾ ಬಿಡುಗಡೆ ಆಗಿ ಇಪ್ಪತ್ತು ವರುಷ. ಆ ಸಿನೆಮಾ ಮೂಲಕ ದೊಡ್ಡ ಹೆಸರು ಪಡೆದು ಇಂದು ದೇಶಾದ್ಯಂತ ಸದ್ದು ಮಾಡ್ತಿರೋ ಸುದೀಪ್ ಅವರಿಗೆ ಇನ್ನೊಮ್ಮೆ ಅಭಿನಂದನೆಗಳು.

Spread the love

Related Articles

Leave a Reply

Your email address will not be published. Required fields are marked *

Back to top button