ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ರೈತ ಹಾಡಿನಲ್ಲಿ ಕಾಣಿಸಿಕೊಂಡ ರಾಜಕೀಯ ನಾಯಕರು

ಆಲ್ ಓಕೆ ಎಂದೇ ಗುರುತಿಸಿಕೊಂಡಿರುವ ಕನ್ನಡದ ಗಾಯಕ, ರ್ಯಾಪರ್ ಅಲೋಕ್ ರೈತರ ಕುರಿತಾದ ಹಾಡೊಂದನ್ನ ಬಿಡುಗಡೆ ಮಾಡಿದ್ದಾರೆ. ರೈತ ಎಂಬ ಹೆಸರಿನಲ್ಲಿ ಈ ಹಾಡು ಯುಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ.

ಅಲೋಕ್ ಹಾಡಿನಲ್ಲಿ ಸಾಮಾನ್ಯವಾಗಿ ಸಾರ್ವಜನಿಕರು, ವಿವಿಧ ಕ್ಷೇತ್ರದ ಗಣ್ಯರು ಕಾಣಿಸಿಕೊಳ್ಳುತ್ತಾರೆ. ಇದೀಗ ಬಿಡುಗಡೆ ಆಗಿರುವ ರೈತ ಹಾಡಿನಲ್ಲೂ ಈ ಪರಂಪರೆ ಮುಂದುವರೆದಿದ್ದು ಹಾಡಿನಲ್ಲಿ ಎಲ್ಲಾ ಪಕ್ಷದ ನಾಯಕರು ಕಾಣಿಸಿಕೊಂಡಿದ್ದಾರೆ. ಇದ್ರ ಜೊತೆಗೆ ರಿಯಲ್ ಲೈಫ್​ನಲ್ಲೂ ಕೃಷಿಕನಾಗಿ ಗುರುತಿಸಿಕೊಂಡಿರುವ ನಟ ಕಿಶೋರ್​ ಕೂಡ ಕಾಣಿಸಿಕೊಂಡಿದ್ದಾರೆ.

ಅಲೋಕ್​ ರೆಡಿ ಮಾಡಿದ್ದ ಎಲ್ಲಾ ಹಾಡುಗಳನ್ನ ನಟ ಪುನೀತ್ ಅವರಿಗೆ ಕೇಳಿಸಿದ್ದರಂತೆ. ಆದರೆ ರೈತ ಹಾಡನ್ನ ಕೇಳಿಸಲು ಸಾಧ್ಯವಾಗಲಿಲ್ಲ ಅನ್ನೋ ಬೇಸರ ಅಲೋಕ್ ಅವರಿಗಿದೆ. ಒಟ್ಟಿನಲ್ಲಿ ರೈತರಿಗಾಗಿ ಆಲ್ಬಂ ಸಾಂಗ್ ರಿಲೀಸ್ ಆಗಿರೋದು ಮೆಚ್ಚುವಂತದ್ದು.

Spread the love

Related Articles

Leave a Reply

Your email address will not be published. Required fields are marked *

Back to top button