Breaking NewsLatestಮೆಟ್ರೋರಾಷ್ಟ್ರೀಯವಿದೇಶಸುದ್ದಿ

ರಷ್ಯಾ-ಉಕ್ರೇನ್ ಯುದ್ಧ: ದೊಡ್ಡ ಬಿಕ್ಕಟ್ಟಿನತ್ತ ತಿರುಗುವ ಅಪಾಯ, ಭಾರತ ಎಚ್ಚರಿಕೆ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು ತಕ್ಷಣ ಶಮನಗೊಳಿಸಬೇಕೆಂದು ಭಾರತ ಕರೆ ನೀಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ಮೂರ್ತಿ ಪರಿಸ್ಥಿತಿಯು ದೊಡ್ಡ ಬಿಕ್ಕಟ್ಟಿನತ್ತ ತಿರುಗುವ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ.

ಗುರುವಾರ ಬೆಳಗ್ಗೆ ಉಕ್ರೇನ್ ನಲ್ಲಿ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾದ ಕಾರಣ ಇದು ಈ ವಾರದಲ್ಲಿ ನಡೆದ ಭದ್ರತಾ ಮಂಡಳಿಯ ಎರಡನೇ ಸಭೆಯಾಗಿದೆ. ಪರಿಸ್ಥಿತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಮತ್ತು ಕೇಂದ್ರೀಕೃತ ರಾಜತಾಂತ್ರಿಕತೆಗೆ ಒತ್ತು ನೀಡದರು.

ಈ ಕುರಿತು ವಿದೇಶಾಂಗ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಆಕಸ್ಮಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ವಾಯು ಪ್ರದೇಶವನ್ನು ಮುಚ್ಚಿರುವ ಕಾರಣ ಪರ್ಯಾಯವಾಗಿ ಸ್ಥಳಾಂತರಿಸುವ ಮಾರ್ಗಗಳನ್ನು ಸಕ್ರಿಯಗೊಳಿಸಲಾಗುತ್ತಿದೆ.

ರಷ್ಯಾದಲ್ಲಿರುವ ಹೆಚ್ಚುವರಿ ಅಧಿಕಾರಿಗಳನ್ನು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ ಮತ್ತು ಉಕ್ರೇನ್ ನ ನೆರೆಯ ದೇಶಗಳಲ್ಲಿ ನಿಯೋಜಿಸಲಾಗುತ್ತಿದೆ. ಉಕ್ರೇನ್ ನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.  

ಈ ನಡುವೆ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಉಕ್ರೇನ್ ಮೇಲೆ ರಷ್ಯಾದ ಪಡೆಗಳು ದಾಳಿ ಮಾಡುವುದನ್ನು ತಡೆಯಲು ಅಧ್ಯಕ್ಷ ಪುಟಿನ್ ಅವರಿಗೆ ನೇರ ಮನವಿ ಮಾಡಿದ್ದಾರೆ.  

Spread the love

Related Articles

Leave a Reply

Your email address will not be published. Required fields are marked *

Back to top button