ಸಿನಿಮಾಸೆಲೆಬ್ರಿಟಿ

ಉಮಾಪತಿ ಕಡೆಯಿಂದ ಮತ್ತೊಂದು ‘3 ಸೀಕ್ರೇಟ್ ಬಾಂಬ್’!

ಪೂರ್ಣ ವಿ-ರಾಮ

ನಿರ್ಮಾಪಕ ಹಾಗೂ ನಟ ದರ್ಶನ್ ನಿಕಟವರ್ತಿ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಇನ್ನೊಂದು ಬಾಂಬ್ ಸಿಡಿಸಿದ್ದಾರೆ. ದರ್ಶನ್ ಅವರಿಗೆ ಇಪ್ಪತ್ತೈದು ಕೋಟಿ ವಂಚನೆ ಪ್ರಕರಣದಲ್ಲಿ ಇದನ್ನೆಲ್ಲಾ ಅವರ ಆತ್ಮೀಯರಾದ ಹರ್ಷ ಮೆಲಾಂಟ ಅವರೇ ಯಾಕೆ ಮಾಡಿರಬಾರದು? ರಾಕೇಶ್ ಪಾಪಣ್ಣನೇ ಯಾಕೆ ಈ ಸಂಚಿನಲ್ಲಿ ಶಾಮೀಲಾಗಿರಬಾರದು ಎಂದಿದ್ದಾರೆ. ಇದರ ಜೊತೆಗೆ ನನ್ನ ಬಾಯಿಂದ ಆ ಮೂರು ಸೀಕ್ರೇಟ್ ಹೊರಬಿದ್ದರೆ ಇಡೀ ಇಂಡಸ್ಟ್ರಿ ಅಲ್ಲೋಲ ಕಲ್ಲೋಲ ಆಗಿಬಿಡುತ್ತದೆ. ಸುಮಲತಾ ಎಚ್ ಡಿಕೆ ಗಲಾಟೆ ಆ ಮೂರು ಸೀಕ್ರೇಟ್ ಮುಂದೆ ಏನೂ ಅಲ್ಲ ಎಂದು ಪರೋಕ್ಷವಾಗಿ ಅವರು ದರ್ಶನ್ ಆಪ್ತವಲಯಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ!

‘ನನಗೆ ಇಪ್ಪತ್ತೈದು ಕೋಟಿ ಅಗತ್ಯವೇ ಇಲ್ಲ’!
ಫಿಲಂ ಸಿಟಿ ಪ್ಲಾನ್ ಮಾಡ್ತಾ ಇದೀನಿ. ಇನ್ನೊಂದು ಕಡೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಕೆಲಸ ನಡೆಯುತ್ತಿದೆ. ತಂದೆಯ ಆಸ್ತಿ ಇದೆ. ನನ್ನದೇ ಆದ ಬಿಜಿನೆಸ್ ಇದೆ. ಪರಿಸ್ಥಿತಿ ಹೀಗಿರುವಾಗ ನಾನ್ಯಾಕೆ ದರ್ಶನ್ ಅವರ ಆಸ್ತಿಪತ್ರ ಡುಪ್ಲಿಕೇಟ್ ಮಾಡಿ, ಇಪ್ಪತ್ತೈದು ಕೋಟಿಗೆ ಯಾರನ್ನೋ ಬಿಡುತ್ತೇನೆ? ನನಗೆ ನನ್ನದೇ ಆದ ಕೆಲಸ ಘನತೆ ತಾಕತ್ತು ಇದೆ. ಅದನ್ನು ದರ್ಶನ್ ಆಪ್ತರು ಪ್ರಶ್ನೆ ಮಾಡಿದರೆ ನಾನು ಸಮ್ಮನೆ ಕೂರೋದಿಲ್ಲ. ಆ ಮೂರು ಸೀಕ್ರೇಟ್ ಬಿಚ್ಚಿಟ್ಟರೆ ಎಲ್ಲವೂ ಅಲ್ಲೋಲ ಕಲ್ಲೋಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇನ್ನೊಂದು ಕಡೆ ದರ್ಶನ್ ಆಪ್ತವಲಯ ಉಮಾಪತಿಯವರ ಮತ್ತು ನಕಲಿ ಬ್ಯಾಂಕ್ ಮ್ಯಾನೇಜರ್ ಎಂದುಕೊಂಡು ಸಿಕ್ಕಿಬಿದ್ದಿರುವ ಅರುಣಾ ಕುಮಾರಿ ಅವರ ಆಡಿಯೋ ಕ್ಲಿಪ್ ಗಳನ್ನು ಹೊರಬಿಡುತ್ತಿದೆ. ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತೋ? ಇದರ ಹಿಂದೆ ಇನ್ಯಾರ್ಯಾರ ಹೆಸರು ಆಚೆಬರುತ್ತೋ ಕಾದುನೋಡಬೇಕಿದೆ! ದರ್ಶನ್ ಅವರು ಹೇಳುವ ಪ್ರಕಾರ ಈಗ ಚೆಂಡು ಉಮಾಪತಿ ಶ್ರೀನಿವಾಸ್ ಅವರ ಅಂಗಳದಲ್ಲಿದೆ!

Spread the love

Related Articles

Leave a Reply

Your email address will not be published. Required fields are marked *

Back to top button