ಮನರಂಜನೆಸಿನಿಮಾಸ್ಯಾಂಡಲ್ ವುಡ್
ಗೋಲ್ಡನ್ ಸ್ಟಾರ್ ಗಣೇಶ್ ಮಗಳ ಬರ್ತಡೇ ಝಲಕ್!

ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಯ ಮಗಳು ಚಾರಿತ್ರ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಗಳ ಕೆಲವು ಫೋಟೋಗಳನ್ನ ಶೇರ್ ಮಾಡುವ ಮೂಲಕ ದಂಪತಿಗಳು ಮಗಳಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಮಗಳ ಹುಟ್ಟುಹಬ್ಬವನ್ನ ಗಣೇಶ್ ದಂಪತಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಚಾರಿತ್ರ್ಯ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿ ಚಾರಿತ್ರ್ಯಗೆ ಶುಭ ಹಾರೈಸಿದ್ದಾರೆ.

ಹಸಿರು ಬಣ್ಣದ ಗೌನ್ ತೊಟ್ಟಿದ್ದ ಚಾರಿತ್ರ್ಯ ಮತ್ತಷ್ಟು ಸುಂದರವಾಗಿ ಕಂಗೊಳಿಸಿದ್ದಾಳೆ. ಬಣ್ಣ ಬಣ್ಣದ ಬಲೂನ್, ಕಲರ್ ಫುಲ್ ಲೈಟಿಂಗ್ ಗಳಿಂದ ಬರ್ತಡೇ ಪಾರ್ಟಿಗೆ ಗಣೇಶ್ ದಂಪತಿಗಳು ಮತ್ತಷ್ಟು ಮೆರುಗು ನೀಡಿದ್ರು.

ಓದಿನ ಜೊತೆಗೆ ನಟನೆ ಹಾಗೂ ಡ್ಯಾನ್ಸ್ ನಲ್ಲೂ ಚಾರಿತ್ರ್ಯ ಮುಂದಿದ್ದಾಳೆ. ಈಗಾಗ್ಲೆ ಗಣೇಶ್ ನಟನೆಯ ಚಮಕ್ ಸಿನಿಮಾದಲ್ಲಿ ಚಾರಿತ್ರ್ಯ ಬಣ್ಣ ಹಚ್ಚಿದ್ದಾಳೆ.





