ಹೊಟೇಲ್ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ಆರೋಪ; ಕ್ರಮ ಕೈಗೊಳ್ಳಲು ಇಂದ್ರಜಿತ್ ಲಂಕೇಶ್ ಒತ್ತಾಯ

ಬೆಂಗಳೂರು: ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದಾರೆ.
ಜುಲೈ 3ರಂದು ಈ ಘಟನೆ ನಡೆದಿದ್ದು, ಆ ಹೊಟೇಲ್ ಮಾಲೀಕ ಸಂಧೇಶ್ ನಾಗರಾಜ್ ಸೆಲೆಬ್ರಿಟಿಗಳಿಗೆ ಬೆಂಬಲಿಸುತ್ತಿದ್ದಾರೆಯೇ ಹೊರತು, ಹಲ್ಲೆಗೊಳಗಾದವನ ಬಗ್ಗೆ ಕಅಳಜಿ ತೋರಿಸುತ್ತಿಲ್ಲ ಎಂದು ಇಂದ್ರಜಿತ್ ಟೀಕಿಸಿದ್ದಾರೆ.
ಘಟನೆಗೆ ಪ್ರಮುಖ ಸಾಕ್ಷಿಯಾಗಬೇಕಾದ ಹೊಟೇಲ್ ಸಿಸಿಟಿವಿ ಫೂಟೇಜ್ ಇಲ್ಲ ಎಂದು ಹೇಳಲಾಗುತ್ತಿದೆ. ಹತ್ತೇ ದಿನದಲ್ಲಿ ಅದು ಹೇಗೆ ಡಿಲೀಟ್ ಆಗುತ್ತದೆ ಎಂದು ಇಂದ್ರಜಿತ್ ಪ್ರಶ್ನಿಸಿದ್ದಾರೆ.
ಮೈಸೂರು ಪೊಲೀಸರ ಬಗ್ಗೆಯೂ ತಕರಾರು ತೆಗೆದಿರುವ ಇಂದ್ರಜಿತ್ ಲಂಕೇಶ್, ಈ ಪ್ರಕರಣದ ಬಗ್ಗೆ ಪೊಲೀಸರೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್, ಊಟ ತಡವಾಯಿತೆಂದು ಬೈದಿದ್ದೆ. ಹಲ್ಲೆ ಆಗಿಲ್ಲ ಎಂದಿದ್ದಾರೆ.
ಆದರೆ, ಹಲ್ಲೆ ನಡೆದಿದ್ದಕ್ಕೆ ನನ್ನ ಬಳಿ ಸಾಕ್ಷ್ಯಗಳಿವೆ, ಒದಗಿಸುವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.




