ಮನರಂಜನೆಸಿನಿಮಾ

Bhavana Menon: ಐದು ವರ್ಷದ ಹಿಂದಿನ ಘಟನೆ ನೆನಪಿಸಿಕೊಂಡ ನಟಿ ಭಾವನಾ

ಖ್ಯಾತ ನಟಿ ಭಾವನಾ ಮೆನನ್ ಕಳೆದ ಐದು ವರ್ಷಗಳ ಹಿಂದೆ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. 2017ರ ಫೆಬ್ರವರಿಯಲ್ಲಿ ಭಾವನಾ ಚಿತ್ರೀಕರಣ ಮುಗಿಸಿಕೊಂಡು ತ್ರಿಶೂರ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಅವರನ್ನ ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಘಟನೆಯಲ್ಲಿ ಮಲಯಾಳಂನ ಖ್ಯಾತ ನಟ ದಿಲೀಪ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು.

ಇದು ಸುಲಭದ ಪ್ರಯಾಣವಾಗಿರಲಿಲ್ಲ. ಬಲಿಪಶು ಆಗಿ ನಂತರ ಬದುಕುಳಿಯುವವರೆಗಿನ ಪ್ರಯಾಣ ಇದು. ನಾನು ಅಪರಾಧ ಎಸಗಿದವಳಲ್ಲ. ಆದರೂ ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತಿವೆ. ಇದನ್ನು ನೋಡಿದಾಗ ನ್ಯಾಯಕ್ಕಾಗಿನ ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ಮನವರಿಗೆ ಆಗಿದೆ ಎಂದಿದ್ದಾರೆ.

ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಮತ್ತು ಯಾರೂ ಇಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವವರಿಗೆ ನಿಮ್ಮ ಪ್ರೀತಿಯ ಹೃತ್ಪೂರ್ವಕ ಧನ್ಯವಾದಗಳು ಎಂದು ನಟಿ ಭಾವನಾ ಮೆನನ್ ಬರೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button