ಸಿನಿಮಾ

ಭಾರತರತ್ನ ಎನ್​ಟಿಆರ್ ಕಾಲಿನ ಉಗುರಿಗೆ ಸಮ: ನಂದಮೂರಿ ಬಾಲಕೃಷ್ಣ

ಹೈದರಾಬಾದ್: ಭಾರತ ರತ್ನ ನಮ್ಮ ತಂದೆ ಎನ್ ಟಿ ರಾಮರಾವ್ ಕಾಲಿನ ಉಗುರಿಗೆ ಸಮ ಎಂದು ಹೇಳುವ ಮೂಲಕ ನಟ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ತೆಲುಗು ಚಾನೆಲ್ಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತೆಲುಗು ಸಿನಿಮಾಕ್ಕೆ ನನ್ನ ಕುಟುಂಬ ನೀಡಿದ ಕೊಡುಗೆಗೆ ಯಾವ ಪ್ರಶಸ್ತಿಗಳು ಸಮವಲ್ಲ. ಭಾರತ ರತ್ನ ನಮ್ಮ ತಂದೆಯ ಕಾಲಿನ ಉಗುರಿಗೆ ಸಮ ಎಂದು ಹೇಳಿದ್ದಾರೆ.

ಆಸ್ಕರ್ ಬಗ್ಗೆಯೂ ಅವರು ಇದೇ ರೀತಿ ಅವಹೆಳನಕಾರಿಯಾಗಿ ಮಾತನಾಡಿದ್ದಾರೆ. ಎ ಆರ್ ರೆಹಮಾನ್ ಯಾರೆಂದು ನನಗೆ ಗೊತ್ತಿಲ್ಲ. ಅವರಿಗೇನೋ ಆಸ್ಕರ್ ಬಂದಿದೆಯೆಂದು ಕೇಳಿದ್ದೇನೆ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button