ಸಿನಿಮಾ

ಉಮಾಪತಿ ಮಾಡಿದ್ದು ತಪ್ಪೇ : ಅರುಣಾ ಕುಮಾರಿ!

ಪೂರ್ಣ ವಿ-ರಾಮ

ದರ್ಶನ್ ಆಪ್ತರ ನಡುವೆ ಒಂದಷ್ಟು ಗೊಂದಲ ಸೃಷ್ಟಿಸಿದ ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ಏಕಾಏಕಿ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿ ಉಮಾಪತಿ ಮೇಲೆ ಆರೋಪ ಮಾಡಿದ್ದಾರೆ!

ನನ್ನನ್ನು ಅನಗತ್ಯವಾಗಿ ಲೋನ್ ವಿಚಾರದಲ್ಲಿ ತಂದುಬಿಟ್ಟು ಇದೀಗ ಏನೂ ಗೊತ್ತಿಲ್ಲದಂತೆ ನಾಟಕ ಆಡುತ್ತಿರುವುದು ಸರಿಯಲ್ಲ ಎಂದಿದ್ದಾರೆ ಅರುಣಾ.

‘ನಾನೇನು ಕಳ್ಳತನ ಮಾಡಿಲ್ಲ…ಯಾಮಾರಿಸಿಲ್ಲ…!’

ಅರುಣಾ ಕುಮಾರಿ ದರ್ಶನ್ ಅವರನ್ನು ಸಂಪರ್ಕ ಮಾಡಿದ್ದು ನಿಜ. ಎರಡು ಬಾರಿ ಅವರ ತೋಟದ ಮನೆಯಲ್ಲಿ ಭೇಟಿ ಮಾಡಿದ್ದೆ. ಆದರೆ ಇವೆಲ್ಲವನ್ನೂ ಉಮಾಪತಿ ಅವರೇ ಹೇಳಿ ಮಾಡಿಸಿದ್ದು. ಅವರೇ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಲು ಫೋರ್ಸ್ ಮಾಡಿದ್ದು. ದರ್ಶನ್ ಅವರ ಆಪ್ತ ಹರ್ಷ ಅವರಿಗೆ ಲೋನ್ ಬೇಕಾಗಿದೆ. ಹೋಗಿ ದರ್ಶನ್ ಅವರಿಂದ ಶ್ಯೂರಿಟಿ ಹಾಕಿಸಿಕೊಳ್ಳಿ ಎಂದು ಅದ್ಯಾಕೆ ಒತ್ತಾಯ ಮಾಡಿದರೋ, ಈಗ್ಯಾಕೆ ಉಲ್ಪಾ ಹೊಡೆಯುತ್ತಿದ್ದಾರೋ ಗೊತ್ತಿಲ್ಲ. ನಾನು ಹೋಗಿ ಸಾಲ ಪಡೆಯಲು ಅಪ್ರೋಚ್ ಮಾಡಿದ್ದೆನೇ ಹೊರತು ಲೋನ್ ಅಪ್ಲೇ ಮಾಡಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಇದರಿಂದ ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಆಗುತ್ತಿದೆ. ನನ್ನ ಫ್ಯಾಮಿಲಿ ಮೆಂಬರ್ಸ್ ಕೂಡ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ. ಹೀಗೆ ನನ್ನನ್ನು ಮಧ್ಯ ಇಟ್ಟುಕೊಂಡು ಉಮಾಪತಿ ಯಾಕೆ ಆಟ ಆಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ ಅರುಣಾ ಕುಮಾರಿ.

ಉಮಾಪತಿ ಪರಿಚಯ ಹೊಸತೇನಲ್ಲ!

ಉಮಾಪತಿಯವರು ನನ್ನ ಪರಿಚಯ ತೀರಾ ಇತ್ತೀಚಿನದು ಅಂದಿದ್ದಾರೆ. ಆದರೆ ಅವರು ಮಾರ್ಚ್ ತಿಂಗಳಿನಿಂದ ಗೊತ್ತು. ಅವರೇ ನನಗೆ ಹೋಗಿ ದರ್ಶನ್ ಅವರನ್ನು ಭೇಟಿಯಾಗಿ. ಹರ್ಷ ಅವರಿಗೆ ಲೋನ್ ಕೊಡಿಸಿ ಅಂತ ಪ್ರೆಷರ್ ಹಾಕಿದ್ದು. ಅವರು ಏನು ಹೇಳಿದರೋ ಅದನ್ನಷ್ಟೇ ನಾನು ಮಾಡಿದೆ. ಈಗ ನನ್ನನ್ನ ಯಾಕೆ ಬಲಿಪಶು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಎತ್ತಿದ್ದಾರೆ ಆರೋಪಿ ಅರುಣಾ!

Spread the love

Related Articles

Leave a Reply

Your email address will not be published. Required fields are marked *

Back to top button