ಸುದೀಪ್ ಚಿತ್ರದಲ್ಲಿ ಅಮಿತಾಭ್?

ಪೂರ್ಣ ವಿ-ರಾಮ
ಕನ್ನಡದ ಜನಪ್ರಿಯ ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣಾದಲ್ಲಿ ದೇಶದ ಟಾಪ್ ಸ್ಟಾರ್ ಒಬ್ಬರು ನಟಸುತ್ತಾರೆ ಎನ್ನಲಾಗುತ್ತಿದ್ದು, ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಹೆಸರು ಹೆಚ್ಚು ಓಡಾಡುತ್ತಿದೆ.
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ವಿರಚಿತ ಈ ಚಿತ್ರ ಸಾಕಷ್ಟು ಕಾರಣಕ್ಕೆ ನ್ಯೂಸ್ ಆಗಿದೆ. ಚಿತ್ರದ ಪೋಸ್ಟರ್ ಒಂದನ್ನು ದುಬೈನ ದೊಡ್ಡ ಟವರ್ ಮೇಲೆ ರಿಲೀಸ್ ಮಾಡಿದ್ದಾಗಿದೆ. ಅದೇ ವಿಕ್ರಾಂತ್ ರೋಣ ಸಿನೆಮಾದಲ್ಲಿ ಅಮಿತಾಭ್ ಅವರೇ ಯಾಕೆ ನಟಿಸುತ್ತಿರಬಹುದು ಎನ್ನುವುದಕ್ಕೆ ಇನ್ನೊಂದು ಕಾರಣವೂ ಇದೆ. ಈಗಾಗಲೇ ಅಮಿತಾಭ್ ಜೊತೆ ರಣ್ ಚಿತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಜೊತೆಗೆ ಸುದೀಪ್ ಹಾಗೂ ಅಮಿತಾಭ್ ನಡುವೆ ಉತ್ತಮ ಬಾಂಧವ್ಯ ಕೂಡ ಇದೆ.
ಅಮೃತಧಾರೆಗೆ ಬಂದಿದ್ದ ಅಮಿತಾಭ್!
ಅಮಿತಾಭ್ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ನಟಿಸಿದ್ದರು. ಸುದೀಪ್ ಜೊತೆ ಸೌತ್ ಇಂಡಿಯಾದ ಇನ್ನೊಂದು ಬಿಗ್ಗೆಸ್ಟ್ ಚಿತ್ರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ವಿಕ್ರಾಂತ್ ರೋಣ ವಿಷಯಕ್ಕೆ ಅಮಿತಾಭ್ ಹೆಸರು ಕೇಳಿಬರುತ್ತಿದೆ. ಅವರು ನಟಿಸಿದರೆ ಖಂಡಿತ ಕನ್ನಡ ಚಿತ್ರಕ್ಕೆ ಮತ್ತಷ್ಟು ಮೆರಗು ಬರುತ್ತದೆ.
ಲೆಟ್ಸ್ ಸೀ ಏನಾಗುತ್ತೆ?




