Latestಮನರಂಜನೆಸಿನಿಮಾ

Rashmika Mandanna: ರಶ್ಮಿಕಾ ಸಿನಿಮಾವೊಂದಕ್ಕೆ ಪಡೆದುಕೊಳ್ಳೋ ಸಂಭಾವನೆ ಎಷ್ಟು ಗೊತ್ತಾ…?

ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಪ್ಪ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಕೇವಲ 20 ದಿನದಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾ ಓಟಿಟಿಯಲ್ಲೂ ಭಾರಿ ಸದ್ದು ಮಾಡ್ತಿದೆ. ಇದೇ ಗೆಲುವಿನಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ.

ಪುಪ್ಪ ಸಿನಿಮಾ ಹಿಟ್ ಆಗ್ತಿದ್ದಂಗೆ ರಶ್ಮಿಕಾ ತಮ್ಮ ಸಂಭಾವನೆಯನ್ನ ಶೇ. 50 ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಪುಪ್ಪ ಸಿನಿಮಾದ ಮೊದಲ ಭಾಗಕ್ಕೆ ಎರಡು ಕೋಟಿ ಸಂಭಾವನೆ ಪಡೆದಿದ್ದ ನಟಿ ಎರಡನೇ ಭಾಗದಲ್ಲಿ ನಟಿಸೋಕೆ ಮೂರು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ.

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಪ್ಪ ಸಿನಿಮಾದ ಸಕ್ಸಸ್ ನಲ್ಲಿರೋ ರಶ್ಮಿಕಾ ಬಾಲಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಿದ್ಧಾರ್ಥ್ ಮೆಲ್ಹೋತ್ರಾ ನಾಯಕನಾಗಿ ನಟಿಸ್ತಿರೋ ಮಿಷನ್ ಮಜ್ನು ಹಾಗೂ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಚಿತ್ರದಲ್ಲೂ ರಶ್ಮಿಕಾ ನಟಿಸ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button