ಸಿನಿಮಾಸೆಲೆಬ್ರಿಟಿ

ಗೋಲ್ಡನ್ ಹೀರೋ ಗಣೇಶ್ ಸಾರ್ಥಕ ಹುಟ್ಟುಹಬ್ಬ!

ಪೂರ್ಣ ವಿ-ರಾಮ

ಇಂದು ಕನ್ನಡ ಚಿತ್ರರಂಗದ ಗೋಲ್ಡನ್ ಲೆಗ್ ಗಣೇಶ್ ಅವರ ಹುಟ್ಟುಹಬ್ಬದ ಸಂಭ್ರಮ. ಕಾಮಿಡಿ ಟೈಮ್ ಎನ್ನೋ ಫೋನ್ ಇನ್ ಕಾರ್ಯಕ್ರಮದ ಮೂಲಕ ಎಂಟ್ರಿ ಕೊಟ್ಟು, ಫೋನ್ ಟವರ್ ರೇಂಜಿಗೆ ಬೆಳೆದು ನಿಂತ ಗಣೇಶ್ ಹರಿಸಿದ್ದು ಮಳೆಯಷ್ಟೇ ಅಲ್ಲ, ಗೆಲುವಿನ ಸುರಿಮಳೆ. ಚೆಲ್ಲಾಟ ಹುಡುಗಾಟಕ್ಕೂ ಮೀರಿದ ಗೆಲುವು ಅವರನ್ನು ಅರಸಿ ಬಂದಿದ್ದುಖಂಡಿತ ಅವರಲ್ಲಿನ ಪ್ರತಿಭೆಗೆ ಸಿಕ್ಕ ಸದ್ಗೌರವ.

ನೋ ಬರ್ತ್ ಡೇ ಸೆಲೆಬ್ರೇಷನ್!
ಗಣೇಶ್ ಇವತ್ತು ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುತ್ತಿಲ್ಲ. ತಮ್ಮ ಅಭಿಮಾನಿಗಳಿಗೂ ಅದನ್ನೇ ಕೇಳಿಕೊಂಡಿರುವ ಗಣಿ, ಕೇಕ್ ಕತ್ತರಿಸೋ ಬರದಲು ಅದೇ ದುಡ್ಡನ್ನ ಕಷ್ಟದಲ್ಲಿರುವವರಿಗೆ ಬಿತ್ತರಿಸಿ ಎಂದು ಕೇಳಿಕೊಂಡಿದ್ದಾರೆ. ಆ ಮೂಲತ ತಮ್ಮ ಬರ್ತ್ ಡೇಯನ್ನು ಸಾರ್ಥಕಗೊಳಿಸಿ ಎಂದು ಮನವಿ ಮಾಡಿದ್ದಾರೆ.

ಸಖತ್ ಶೂಟಿಂಗ್ ನಲ್ಲಿ ಗಣಿ ಬಿಜಿ!
ಗಣೇಶ್ ಇದೀಗ ಸಖತ್ ಎಂಬ ಸಿನೆಮಾ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಲಾಕ್ ಡೌನ್ ಮುಗಿದ ಬೆನ್ನಲ್ಲೇ ಖುಷಿಯಿಂದ ಶೂಟಿಂಗ್ ಗೆ ತೆರಳುತ್ತಿದ್ದೀನಿ. ನಿಮ್ಮೆಲ್ಲರ ಪ್ರೀತಿ ಆಶಿರ್ವಾದ ಹೀಗೇ ಇರಲಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಅವರು ನಟಿಸಿರೋ ಗಾಳಿಪಟ 2 ಚಿತ್ರದ ಮೋಷನ್ ಪೋಸ್ಟರ್ ಇನ್ನೇನು ಬಿಡುಗಡೆ ಆಗಲಿದೆ. ಇನ್ನೊಂದು ಕಡೆ ತ್ರಿಬ್ಬಲ್ ರೈಡಿಂಗ್ ಚಿತ್ರದ ಟೀಸರ್ ಕೂಡ ರಿಲೀಸಾಗಲಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ನಲ್ಲಿ ಬಂದ ಗಾಳಿಪಟ ಚಿತ್ರದ ಮುಂದುವರಿದ ಭಾಗದ ಮೇಲೆ ಮಹಾ ನಿರೀಕ್ಷೆಯೇ ಇದೆ. ಇನ್ನೊಂದು ಕಡೆ ಮುಂಗಾರುಮಳೆ ಚಿತ್ರಕ್ಕೆ ಅಸೋಸಿಯೇಟ್ ಆಗಿದ್ದ ಮಹೇಶ್ ಗೌಡ ನಿರ್ದೇಶನದ ತ್ರಿಬ್ಬಲ್ ರೈಡಿಂಗ್ ಚಿತ್ರಕ್ಕೂ ಸೇಮ್ ಡೈಲಾಗ್!

ಅಂದಹಾಗೆ ಸಖತ್ ಸಿನೆಮಾವನ್ನ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ ಈ ಜೋಡಿ ಚಮಕ್ ಎನ್ನೋ ಚಿಂದಿ ಚಿತ್ರ ಕೊಟ್ಟಿತ್ತು. ಅದು ಯಶಸ್ವೀ ಐವತ್ತು ದಿನ ಪೂರೈಸಿತ್ತು. ರಶ್ಮಿಕಾ ಹಾಗೂ ಗಣೇಶ್ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಅದೇ ತಂಡ ಇದೀಗ ಸಖತ್ ಸಿನೆಮಾ ಕೈಗೆತ್ತಿಕೊಂಡಿದೆ. ಅದೂ ಸಖತ್ತಾಗೇ ಇರುತ್ತದೆ ಎಂಬ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಗೋಲ್ಡನ್ ಸ್ಟಾರ್!

Spread the love

Related Articles

Leave a Reply

Your email address will not be published. Required fields are marked *

Back to top button