ಸಿನಿಮಾಸೆಲೆಬ್ರಿಟಿ

ರಶ್ಮಿಕಾಗೆ ಅಡ್ಡ ಬಂದ್ರಾ ಕಿಯಾರಾ ಅಡ್ವಾಣಿ?

ರಶ್ಮಿಕಾ ಮಂದಣ್ಣಗೆ ಮತ್ತೊಂದು ದೊಡ್ಡ ಛಾನ್ಸ್ ಮಿಸ್ ಆಯ್ತಾ? ರಾಮ್ ಚರಣ್ ನಟನೆಯ ಇನ್ನೊಂದು ದೊಡ್ಡ ಚಿತ್ರದಿಂದ ರಶ್ಮಿಕಾ ಔಟ್ ಆದ್ರಾ? ಅವರು ನಟಿಸಬೇಕಿದ್ದ ಜಾಗವನ್ನು ಇನ್ನೊಬ್ಬ ಜನಪ್ರಿಯ ನಟಿ ಕಿತ್ತುಕೊಂಡ್ರಾ? ರಶ್ಮಿಕಾ ಅಭಿಮಾನಿಗಳ ಖುಷಿಗೆ ಹುಳಿ ಹಿಂಡಿ ಹಿಪ್ಪೆ ಮಾಡಿಬಿಟ್ರಾ? ಇಲ್ಲಿದೆ ಫುಲ್ ಡೀಟೇಲ್ಸ್!

ಶಂಕರ್ ಚಿತ್ರದಿಂದ ರಶ್ಮಿಕಾ ಔಟ್?!?
ಅಭಿಮಾನಿಗಳು ಮತ್ತು ತಮಿಳು ಚಿತ್ರೋದ್ಯಮ ಅಂದುಕೊಂಡಂತೇ ಆಗಿದ್ದರೆ ಇಷ್ಟೊತ್ತಿಗಾಗಲೇ ರಶ್ಮಿಕಾ ಶಂಕರ್ ನಿರ್ದೇಶನದ ಆ ಚಿತ್ರಕ್ಕೆ ನಾಯಕಿಯಾಗಿ ಫಿಕ್ಸ್ ಆಗಬೇಕಿತ್ತು. ಆದರೆ ರಾಮ್ ಚರಣ್ ನಟನೆಯ ಆ ಬಹುನಿರೀಕ್ಷಿತ ಚಿತ್ರದಲ್ಲಿ ಹೀರೋಯಿನ್ ಆಗುವ ಅದೃಷ್ಟ ಕೊನೇ ಘಳಿಗೆಯಲ್ಲಿ ರಶ್ಮಿಕಾ ಕೈ ತಪ್ಪಿ ಹೋಗಿದೆ. ಆ ಜಾಗಕ್ಕೆ ಕಿಯಾರಾ ಅದ್ವಾನಿ ಅಡ್ಡ ಬಂದು ನಿಂತಿದ್ದಾಳೆ!

ರಾಮ್ ಚರಣ್ 15ನೇ ಮೈಲಿಗಲ್ಲು!
ರೋಬೋ ಖ್ಯಾತಿಯ ಶಂಕರ್ ನಿರ್ದೇಶನ ಮಾಡಲಿರುವ ಈ ಚಿತ್ರ ರಾಮ್ ಚರಣ್ ವೃತ್ತಿ ಬದುಕಿನ ಬಹುದೊಡ್ಡ ಮೈಲಿಗಲ್ಲು ಯಾಕೆಂದರೆ, ಈತನ ಹದಿನೈದನೇ ಚಿತ್ರವಿದು. ಅದಕ್ಕಿಂತ ಹೆಚ್ಚಾಗಿ ಶಂಕರ್ ಈ ಚಿತ್ರವನ್ನು ಬೇರೆ ರೀತಿಯಲ್ಲೇ ತೆರೆಗೆ ತರಬೇಕು ಎಂದು ವರ್ಷಗಟ್ಟಲೇ ಕೂತು ಕೆಲಸ ಮಾಡುತ್ತಿದ್ದಾರೆ! ಈ ಚಿತ್ರದಲ್ಲಿ ರಶ್ಮಿಕಾ ಇರುತ್ತಾರೆ. ರಾಮ್ ಚರಣ್ ಗೆ ಜೋಡಿಯಾಗುತ್ತಾರೆ ಎಂದುಕೊಂಡಿದ್ದು ಇದೀಗ ಜಸ್ಟ್ ಊಹಾಪೂಹ ಸುದ್ದಿಯಾಗಿ ಬದಲಾಗಿದೆ. ಕಿಯಾರಾ ಅಡ್ವಾಣಿ ಅವರೇ ಫೈನಲ್ ಆಗಿದ್ದಾರೆ ಎಂಬ ನ್ಯೂಸು ರಶ್ಮಿಕಾ ಹಾಗೂ ಆಕೆಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ!

Spread the love

Related Articles

Leave a Reply

Your email address will not be published. Required fields are marked *

Back to top button