ಜಿಲ್ಲಾ ಸುದ್ದಿಮನರಂಜನೆಮೈಸೂರುಸಿನಿಮಾಸೆಲೆಬ್ರಿಟಿ

Saraswati Theater: ಪ್ರದರ್ಶನ ನಿಲ್ಲಿಸಿದ ಮೈಸೂರಿನ ಸರಸ್ವತಿ ಚಿತ್ರಮಂದಿರ

ಮೈಸೂರು: ಕೋವಿಡ್‌-19 ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ ಪರಿಣಾಮದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮೈಸೂರಿನ ಚಿತ್ರಮಂದಿರಗಳು ಒಂದೊಂದಾಗಿ ತೆರೆಮರೆಗೆ ಸರಿಯುತ್ತಿವೆ. ಈಗ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರ ಕೂಡ ಇತಿಹಾಸದ ಪುಟ ಸೇರಿದೆ.

ಆರ್ಥಿಕ ಸಂಕಷ್ಟದಿಂದಾಗಿ ಸರಸ್ವತಿ ಚಿತ್ರಮಂದಿರ ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ. ಮೈಸೂರು ನಗರದ ಸರಸ್ವತಿಪುರಂ ಸೇರಿದಂತೆ ಸುತ್ತಮುತ್ತಲಿನ ಏರಿಯಾ ಸಿನಿಪ್ರಿಯರಿಗೆ ಸರಸ್ವತಿ ಚಿತ್ರಮಂದಿರ ಮೆಚ್ಚಿನ ಥಿಯೇಟರ್‌ ಆಗಿತ್ತು. ರಾಜ್‌ಕುಮಾರ್‌ ಅವರ ಕುಟುಂಬಕ್ಕೂ ಈ ಥಿಯೇಟರ್‌ಗೂ ಅವಿನಾಭಾವ ಸಂಬಂಧವಿತ್ತು. ನಟ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳೇ ಹೆಚ್ಚು ಪ್ರದರ್ಶನ ಕಂಡಿದ್ದವು.

ಈ ಚಿತ್ರಮಂದಿರದಲ್ಲಿ ಸಮಯವೂ ಪ್ರೇಕ್ಷಕರಿಗೆ ಪೂರಕವಾಗಿತ್ತು. ಪ್ರದರ್ಶನ ಸಮಯದಲ್ಲಿ ವ್ಯತ್ಯಾಸ ಇತ್ತು. ರಾತ್ರಿ ಶೋ 9.30ಕ್ಕೆ ಇರುತ್ತಿದ್ದರಿಂದ ಪ್ರೇಕ್ಷಕರೂ ಸಹ ಮನೆಯಲ್ಲೇ ಊಟ ಮುಗಿಸಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಅನುಕೂಲವಾಗಿತ್ತು.

ಇತ್ತೀಚೆಗೆ ನಗರದ ಪ್ರತಿಷ್ಠಿತ ಚಿತ್ರಮಂದಿರಗಳು ಆರ್ಥಿಕ ಸಂಕಷ್ಟ ಎದುರಿಸಲಾಗದೇ ಮುಚ್ಚುತ್ತಿವೆ. ಈಚೆಗಷ್ಟೇ ಶಾಂತಲಾ ಹಾಗೂ ಲಕ್ಷ್ಮೀ ಥಿಯೇಟರ್‌ಗಳು ಮುಚ್ಚಿದವು. ಈಗ ಆ ಸಾಲಿಗೆ ಸರಸ್ವತಿ ಚಿತ್ರಮಂದಿರವೂ ಸೇರಿದೆ.

Related Articles

Leave a Reply

Your email address will not be published. Required fields are marked *

Back to top button